ಕೆಜಿಎಫ್’ ಸಿನಿಮಾ ಬಳಿಕ ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿರುವ ಮೆಗಾ ಬಜೆಟ್ ಸಿನಿಮಾ ಸಲಾರ್. ಇದು ನಾಳೆ (ಡಿಸೆಂಬರ್ 22) ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಸಿನಿಮಾ ರಿಲೀಸ್‌ಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ ಅನ್ನುವಾಗ ಇಡೀ ತಂಡ ಸಿನಿಮಾ ಪ್ರಚಾರಕ್ಕೆ ಇಳಿದಿದೆ.
ಕೆಲವು ದಿನಗಳ ಹಿಂದಷ್ಟೇ ರಾಜಮೌಳಿ ಜೊತೆ ಪ್ರಶಾಂತ್ ನೀಲ್, ಪ್ರಭಾಸ್, ಪೃಥ್ವಿರಾಜ್ ಸುಕುಮಾರ್ ಈ ಸಿನಿಮಾದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಆ ವೇಳೆ ಕೂಡ ಪ್ರಶಾಂತ್ ನೀಲ್ ‘ಸಲಾರ್’ ಸಿನಿಮಾದ ಕೆಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದರು. ಈಗ ಹೊಂಬಾಳೆಗೆ ನೀಡಿದ ಸಂದರ್ಶನದಲ್ಲಿ ‘ಸಲಾರ್’ ಸಿನಿಮಾ ಎದುರಿಸುತ್ತಿರುವ ಟೀಕೆಗಳ ಬಗ್ಗೆ ಮಾತಾಡಿದ್ದಾರೆ.
ಸಲಾರ್’ ಟ್ರೈಲರ್ ರಿಲೀಸ್ ಆದಾಗ, ಬಹಳಷ್ಟು ಮಂದಿ ‘ಉಗ್ರಂ’ ರಿಮೇಕ್ ಎಂದು ಹೇಳಿದ್ದರು. ಅದಕ್ಕೆ ಪ್ರಶಾಂತ್ ನೀಲ್ ಪರೋಕ್ಷವಾಗಿ ಉತ್ತರ ಕೊಟ್ಟಿದ್ದಾರೆ. ನಿರೂಪಕರು ನಿಮ್ಮಲ್ಲಿರುವ ಅತೀ ದೊಡ್ಡ ಭಯವೇನು ಅಂತ ಕೇಳಿದಾಗ, ಪ್ರಶಾಂತ್ ನೀಲ್ ಸಲಾರ್ ಹಾಗೂ ಉಗ್ರಂ ಹೋಲಿಕೆ ಬಗ್ಗೆ ಉತ್ತರ ಕೊಟ್ಟಿದ್ದಾರೆ. “ಸಲಾರ್ ನೋಡೋಕೆ ಉಗ್ರಂ ತರ ಇದೆ ಅಂದ್ರೆ ಐ ಡೋಂಟ್ ಕೇರ್” ಅನ್ನೋ ಅರ್ಥದಲ್ಲಿ ಹೇಳಿದ್ದಾರೆ. ಅಷ್ಟಕ್ಕೂ ಪ್ರಶಾಂತ್ ನೀಲ್ ಏನು ಹೇಳಿಕೆ ಕೊಟ್ಟಿದ್ದಾರೆ? ಅನ್ನೋದನ್ನು ತಿಳಿಯಲು ಮುಂದೆ ಓದಿ..
bigtvnews | Hubli Dharwad News | Kannada News | Karnataka News Hubli News | News In Hubli | Local news





