ಜಗಳ ಬಿಡಿಸಿದ ಕಾರಣ ಮೂವರು ಮಹಿಳೆಯರು ಸೇರಿದಂತೆ ನಾಲ್ವರು ಕೆ.ಆರ್.ಆಸ್ಪತ್ರೆ ಆವರಣದಲ್ಲಿ ವ್ಯಕ್ತಿ ಮೇಲೆ ದಾಳಿ ಮಾಡಿ ಗಾಯಗೊಳಿಸಿದ ಪ್ರಕರಣ ನಡೆದಿದೆ.ಸುರೇಶ್ ಆಟೋ ಚಾಲಕರಾಗಿದ್ದಾರೆ.ರವಿ ಎಂಬುವರ ಆಟೋ ಓಡಿಸುತ್ತಿದ್ದರು. ರವಿ ರವರ ವಿಜಯನಗರದ ಮನೆಯಲ್ಲಿ ಕೌಟುಂಬಿಕ ವಿಚಾರದಲ್ಲಿ ಗಲಾಟೆ ಆಗಿದೆ. ಪತ್ನಿ ನಾಗರತ್ನ ಎಂಬುವರ ಮೇಲೆ ಸಂಭಂಧಿಕರೇ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ನಾಗರತ್ನರನ್ನ ಆಸ್ಪತ್ರೆಗೆ ಕರೆದೊಯ್ಯಲು ಸುರೇಶ್ ಹೋಗಿದ್ದಾರೆ. ಈ ವೇಳೆ ಜಗಳ ಬಿಡಿಸಿ ಅರೆಪ್ರಜ್ಞಾವಸ್ತೆಯಲ್ಲಿದ್ದ ನಾಗರತ್ನ ರನ್ನ ಕೆ.ಆರ್.ಆಸ್ಪತ್ರೆಗೆ ಕರೆತಂದಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ರವಿ ಸಂಭಂಧಿಕರಾದ ಮಹದೇವಸ್ವಾಮಿ,ಸಾವಿತ್ರಿ, ಪುಟ್ಟಮ್ಮ ಹಾಗೂ ರತ್ನಮ್ಮ ರವರು ನೀನು ಯಾರೋ ಜಗಳ ಬಿಡಿಸಲು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೆ.ಆರ್.ಆಸ್ಪತ್ರೆ ಆವರಣದಲ್ಲೇ ಹಲ್ಲೆ ನಡೆಸಿದ್ದಾರೆ
bigtvnews | Hubli Dharwad News | Kannada News | Karnataka News Hubli News | News In Hubli | Local news

