ಮಹಿಳೆಯೊಬ್ಬರಿಗೆ ಸೇರಿದ್ದ ಜಮೀನಿನ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಆಸ್ತಿಯನ್ನು ಬೇರೊಬ್ಬರಿಗೆ ಪರಭಾರೆ ಮಾಡಿದ್ದ ಆರೋಪದಡಿ ಸುರಪುರ ನಗರಸಭೆಯ ಹಿಂದಿನ ಪೌರಾಯುಕ್ತ ಸೇರಿ ನಾಲ್ವರ ವಿರುದ್ಧ ಸುರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನಗರಸಭೆಯ ಹಿಂದಿನ ಆಯುಕ್ತ ಜೀವನಕುಮಾರ್ (ಹಾಲಿ ಶಹಾಪುರ ನಗರಸಭೆ ಆಯುಕ್ತ), ನಿವೃತ್ತ ಅಧಿಕಾರಿ ಎಜಾಜ್ ಹುಸೇನ್, ಕರ ವಸೂಲಿಗಾರ (ಹಾಲಿ ಕಂದಾಯ ಅಧಿಕಾರಿ) ವೆಂಕಟೇಶ ಹಾಗೂ ಜಯಶೀಲ ಮುರುಳೀಧರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

