ಕಾರಿನಿಂದ ಇಳಿದು ನಡುರಸ್ತೆಯಲ್ಲಿ ತಲವಾರ್ ಝಳಪಿಸುತ್ತಿದ್ದ ಸಿಖ್ ವ್ಯಕ್ತಿಗೆ ಅಮೆರಿಕಾ ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಅಮೆರಿಕಾದ ಲಾಸ್ ಏಂಜಲೀಸ್‌ನಲ್ಲಿ ನಡೆದಿದ್ದು, ಈ ಘಟನೆಯ ದೃಶ್ಯಾವಳಿ ಸಂಪೂರ್ಣವಾಗಿ ಪೊಲೀಸರ ಬಾಡಿಕ್ಯಾಮ್‌ನಲ್ಲಿ ರೆಕಾರ್ಡ್ ಆಗಿದೆ.ಹತ್ಯೆಯಾದ ವ್ಯಕ್ತಿ ಸಿಖ್ ಸಮರ ಕಲೆಯಾದ ಗಟ್ಕಾವನ್ನು ನಡುರಸ್ತೆಯಲ್ಲಿ ಪ್ರದರ್ಶಿಸುತ್ತಿದ್ದ, ಆದರೆ ಇದನ್ನು ನಿಲ್ಲಿಸುವಂತೆ ಪೊಲೀಸರು ಸೂಚಿಸಿದರು ಆತ ನಿಲ್ಲಿಸದ ಹಿನ್ನೆಲೆ ಹಾಗೂ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾದ ಹಿನ್ನೆಲೆ ಅಮೆರಿಕಾ ಪೊಲೀಸರು ಈ ಸಿಖ್ ವ್ಯಕ್ತಿಯ ಕತೆ ಮುಗಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

