ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದೊಳಗೆ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ನಿಂತು ಕಾಡಾನೆ ಉಪಟಳ ನೀಡುತ್ತಿದ್ದು, ವಾಹನ ಸವಾರರು ಭೀತಿಗೊಳಗಾಗಿದ್ದಾರೆ.ಆನೆ ದಾಳಿ ಮಾಡಬಹುದು ಎಂಬ ಭಯದಲ್ಲಿ ವಾಹನದೊಳಗಿದ್ದವರು ಚೀರಿಕೊಳ್ಳುವ ವಿಡಿಯೊ ಜಾಲತಾಣಗಳಲ್ಲಿ ಸುದ್ದಿಯಾಗಿದೆ.ಆಹಾರ ಪದಾರ್ಥ ಸಾಗಿಸುವ ವಾಹನಗಳನ್ನು ಕಾಡಾನೆ ಅಡ್ಡಗಟ್ಟುತ್ತಿದ್ದು ಅರಣ್ಯದೊಳಗೆ ಓಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಡಿಎಫ್‌ಒ ಪ್ರಭಾಕರನ್ ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

