ತಡರಾತ್ರಿ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ವಿದ್ಯುತ್ ಅವಘಡ ಸಂಭವಿಸಿ ಯುವಕನೊಬ್ಬ ಸಾವಿಗೀಡಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ವಿಜಯಪುರ ನಗರದ ರಾಮಪ್ರಸಾದ ಗಲ್ಲಿ ನಿವಾಸಿಯಾಗಿದ್ದ ಶಿವಾಜಿ ಅಲಿಯಾಸ್ ಶುಭಂ ಸಕ್ಪಾಲ್(21) ವಿದ್ಯುತ್ ತಗುಲಿ ಸಾವಿಗೀಡಾಗಿದ್ದಾರೆ.ಲಖನ್ ಚವ್ಹಾಣ ಮತ್ತು ಪ್ರಭು ಜಗತೆ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ವಾಹನಕ್ಕೆ ಹಾಗೂ ಡಿಜೆ ಸಿಸ್ಟಿಂಗೆ ವಿದ್ಯುತ್ ತಂತಿ ತಗಲದಂತೆ ಕೋಲಿನಿಂದ ಎತ್ತಿಹಿಡಿದುಕೊಂಡಿದ್ದ ವೇಳೆ ಯುವಕರಿಗೆ ವಿದ್ಯುತ್ ತಂತಿ ತಗುಲಿ ಅವಘಡ ಸಂಭವಿಸಿದೆ. ಈ ಕುರಿತು ಗಾಂಧಿಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

