ಗದಗ ತಾಲೂಕಿನ ಗ್ರಾಮವೊಂದರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಮಾನುಷ ಘಟನೆ ಬೆಳಕಿಗೆ ಬಂದಿದೆ. ಟ್ಯೂಷನ್ಗೆ ತೆರಳುತ್ತಿದ್ದ ವೇಳೆ ಬಾಲಕಿಯನ್ನು ದಾರಿ ಮಧ್ಯೆ ಅಡ್ಡಗಟ್ಟಿದ ಇಬ್ಬರು ಆರೋಪಿಗಳು, “ನಿಮ್ಮ ಅಣ್ಣ ಅರ್ಜೆಂಟ್ ಆಗಿ ಕರೆಯುತ್ತಿದ್ದಾನೆ” ಎಂದು ನಂಬಿಸಿ ತಮ್ಮ ಜೊತೆ ಬರಲು ಒತ್ತಾಯಿಸಿದ್ದಾರೆ. ಬಾಲಕಿ ನಿರಾಕರಿಸಿದರೂ ಬಲವಂತವಾಗಿ ವಾಹನಕ್ಕೆ ತಳ್ಳಿ ಅಪಹರಿಸಿ, ಬಳಿಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯ ನಂತರ ಮನನೊಂದ ಸ್ಥಿತಿಯಲ್ಲಿ ಮನೆಗೆ ಬಂದ ಬಾಲಕಿ ಪೋಷಕರಿಗೆ ವಿಷಯ ತಿಳಿಸಿದ್ದಾಳೆ. ಇದರಿಂದ ಆಕ್ರೋಶಗೊಂಡ ಬಾಲಕಿಯ ತಾಯಿ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಆರೋಪಿಗಳಾದ ಅಲ್ಲಾಭಕ್ಷ ಕೊಪ್ಪದ ಹಾಗೂ ಆಸಿಫ್ ನಡಾಫ್ ಅವರನ್ನು ಬಂಧಿಸಿದ್ದಾರೆ. ಸದ್ಯ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

