Breaking News

ವಿಚಿತ್ರ ಹಾಗೂ ನಿಗೂಢ ರೀತಿಯಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆ…

ಶಹದೋಲ್ (ಮಧ್ಯಪ್ರದೇಶ):ಶಹದೋಲ್ ಜಿಲ್ಲೆಯಲ್ಲಿ ವಿಚಿತ್ರ ಹಾಗೂ ನಿಗೂಢ ರೀತಿಯಲ್ಲಿ ಮಹಿಳೆಯೊಬ್ಬರ ಮೃತದೇಹ ಸಿಕ್ಕಿದೆ. ಮಹಿಳೆಯ ತಲೆಕೂದಲುಗಳನ್ನು ಕತ್ತರಿಸಲಾಗಿದೆ. ಮೃತದೇಹದಿಂದ ಕಣ್ಣು, ಮೂಗು, ಕಿವಿ ಹಾಗು ನಾಲಿಗೆ ಕಾಣೆಯಾಗಿವೆ. ಮೃತದೇಹದ ಪ್ರಮುಖ ಅಂಗಾಂಗಳು ಕಾಣೆಯಾಗಿದ್ದರಿಂದ ಪ್ರಕರಣದ ತನಿಖೆ ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ನಿಗೂಢ ಕೊಲೆ ಪ್ರಕರಣದ ಹಿಂದೆ ಬಿದ್ದಿರುವ ಪೊಲೀಸರು, ಆರೋಪಿಗಳಿಗೆ ಶೋಧ ತೀವ್ರಗೊಳಿಸಿದ್ದಾರೆ.

ಸಂಪೂರ್ಣ ವಿವರ: ಶಹದೋಲ್ ಜಿಲ್ಲೆಯ ಜೈತ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪಟಪರಿಹ ಟೋಳದ 55 ವರ್ಷದ ಜುನಿ ಬಾಯಿ ಗೊಂಡ್ ಎಂಬ ಮಹಿಳೆಯ ಮೃತದೇಹ ಇದಾಗಿದೆ. ಈ ಮಹಿಳೆ ಮನೆಯಲ್ಲಿ ಒಬ್ಬರೇ ಇರುತ್ತಿದ್ದರಂತೆ. ದುಷ್ಕರ್ಮಿಗಳು ಕಳೆದ ಎರಡು ದಿನದ ಹಿಂದೆ ಕೊಲೆಗೈದು ಪರಾರಿಯಾಗಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮೃತದೇಹ ವಿಕಾರವಾಗಿದೆ. ಕುತ್ತಿಗೆಯ ಮೇಲಿನ ಯಾವುದೇ ಅಂಗಾಂಗಗಳು ಇಲ್ಲ. ತಲೆ ಕೂದಲು ಕತ್ತರಿಸಲಾಗಿದೆ. ಕಣ್ಣು, ಮೂಗು, ಕಿವಿ, ನಾಲಿಗೆಯಲ್ಲಿ ಕಿತ್ತು ಹಾಕಿರುವ ದುರುಳರು, ಆಕೆಯ ಮುಖದ ಮೇಲ್ಮೈ ಚರ್ಮವನ್ನೂ ಸುಲಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ

Share News

About BigTv News

Check Also

ಈ ಬಾರಿಯ ಬಜೆಟ್‌ನಲ್ಲಿ ಉದ್ಯಾನ ನಗರಿ ಬೆಂಗಳೂರು ನಗರಕ್ಕೆ ಬಿಗ್ ಗಿಫ್ಟ್ ನಿರೀಕ್ಷೆ….

ಬೆಂಗಳೂರು: ಲೋಕಸಭೆ ಚುನಾವಣೆಯನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರ ಫೆಬ್ರವರಿ 1ರಂದು 2024-25ನೇ ಸಾಲಿನ ಮಧ್ಯಂತರ ಬಜೆಟ್ ಮಂಡನೆ ಮಾಡಲಿದೆ. ಈ …

Leave a Reply

Your email address will not be published. Required fields are marked *