Breaking News

ಬಳ್ಳಾರಿ : ಪೊಲೀಸ್ ಠಾಣೆ ಕೂಗಳತೆಯಲ್ಲೇ ಒಸಿ, ಮಟ್ಕಾ ದಂಧೆ : ಮೊಬೈಲಲ್ಲಿ ಚಿತ್ರೀಕರಿಸಿದ ವ್ಯಕ್ತಿ ಮೇಲೆ ಹಲ್ಲೆ!

ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನಲ್ಲಿ ಎಗ್ಗಿಲ್ಲದೆ ಒಸಿ ಮಟ್ಕಾ ದಂಧೆ ನಡೆಯುತ್ತಿದೆ. ಯಾವುದೇ ಪೊಲೀಸರ ಭಯ ಇಲ್ಲದೆ ಮಟ್ಕಾ ದಂಧೆ ನಡೆಸುತ್ತಿದ್ದಾರೆ. ಕಂಪ್ಲಿ ಪಟ್ಟಣ ಒಂದರಲ್ಲಿಯೇ ಐದು ಮಟ್ಕಾ ಪಾಯಿಂಟ್ ಗಳಲ್ಲಿ ಈ ಒಂದು ದಂಧೆ ನಡೆಸಲಾಗುತ್ತಿದೆ.ಅಷ್ಟೆ ಅಲ್ಲದೇ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿಯೇ ಮಟ್ಕಾ ದಂಧೆ ನಡೆಯುತ್ತಿದ್ದು, ಪೊಲೀಸರು ಇದಕ್ಕೆ ಸಾತ್ ನೀಡಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.

ಇದನ್ನು ಬಯಲು ಮಾಡಲು ಸ್ಥಳೀಯ ನಿವಾಸಿ ನಾರಾಯಣ ಸ್ವಾಮಿ ತೆರಳಿದ್ದಾರೆ. ಈ ವೇಳೆ ಮೊಬೈಲ್ ನಲ್ಲಿ ದಂಧೆಯ ಚಿತ್ರೀಕರಣ ಮಾಡಿದ್ದಾರೆ. ಈ ವೇಳೆ ಮಟ್ಕಾ ದಂದೆಕೋರರು ನಾರಾಯಣಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾರೆ. ಸದ್ಯ ಕಂಪ್ಲಿ ಸರ್ಕಾರಿ ಆಸ್ಪತ್ರೆಗೆ ಹಲ್ಲೆಗೆ ಒಳಗಾದಂತಹ ನಾರಾಯಣ ಸ್ವಾಮಿಗೆ ಚಿಕಿತ್ಸೆ ನೀಡಲಾಗುತ್ತಿದೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *