ನಗರದ ತಾಲ್ಲೂಕು ಆರೋಗ್ಯ ಕೇಂದ್ರದ ಆವರಣದಲ್ಲಿ ಒಂದೂವರೆ ತಿಂಗಳಿನಿಂದ ‘108’ ಆಂಬುಲೆನ್ಸ್ ಟೈರ್ ಇಲ್ಲದ ಕಾರಣ ಮೂಲೆ ಸೇರಿದ್ದು, ಬಡ ರೋಗಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ.ಸರ್ಕಾರ ಆರೋಗ್ಯ ಕವಚ ಯೋಜನೆಯಲ್ಲಿ ರೋಗಿಗಳಿಗೆ ಅನುಕೂಲವಾಗುವಂತೆ ‘108’ ಆಂಬುಲೆನ್ಸ್ ಯೋಜನೆ ರೂಪಿಸಿದ್ದು, ಅಗತ್ಯ ಇರುವ ಯಾರು ಬೇಕಾದರೂ ‘108’ ಸಂಖ್ಯೆಗೆ ಕರೆ ಮಾಡಿ ಈ ಯೋಜನೆಯ ಲಾಭ ಪಡೆಯಬಹುದಾಗಿದೆ.ಆಂಬುಲೆನ್ಸ್ಗೆ ಒಂದು ಟೈರು ಹಾಕಿಸುವ ಶಕ್ತಿ ಸರ್ಕಾರಕ್ಕೆ ಇಲ್ಲವೇ? ಒಂದು ವೇಳೆ ಸರ್ಕಾರ ಟೈರ್ ಹಾಕಿಸಲು ಹಿಂದೇಟು ಹಾಕಿದರೆ ಆಸ್ಪತ್ರೆ ಅಥವಾ ದಾನಿಗಳ ಸಹಕಾರದಿಂದ ಟೈರ್ ಹಾಕಿಸಿದ್ದರೆ ಅನುಕೂಲವಾಗುತ್ತಿತ್ತು ಎನ್ನುತ್ತಾರೆ ಸಾರ್ವಜನಿಕರು.
bigtvnews | Hubli Dharwad News | Kannada News | Karnataka News Hubli News | News In Hubli | Local news

