Breaking News

ಸಾಲ ಮನ್ನಾ ಆದೇಶ ಪ್ರತಿ ನೀಡಲು ಆಗ್ರಹಿಸಿ ರೈತರ ಪ್ರತಿಭಟನೆ

ರೈತರ ಸಾಲಮನ್ನ ಆದೇಶದ ಪ್ರತಿ ವಿತರಿಸಬೇಕು. ಹಾಗೂ  ರೈತರ  ವಿವಿಧ ಬೇಡಿಕೆಗಳನ್ನು ಇಡೇರಿಸಬೇಕು ಎಂದು ಆಗ್ರಹಿಸಿ,  ರಾಜ್ಯ ಸರ್ಕಾರದ ವಿರುದ್ದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ಮುಖಂಡರು ಧಾರವಾಡದಲ್ಲಿ ಪ್ರತಿಭಟನೆ  ನಡೆಸಿದರು. ನಗರದ ಕಲಾಭನದಲ್ಲಿ ಸೇರಿದ ನೂರಾರು ರೈತರು ಜುಬ್ಲಿ ವೃತ್ತದಲ್ಲು ಪ್ರತಿಭಟನೆ ನಡಿಸಿ ಮೇರವಣೆಗೆ ಮೂಲಕ  ಕೋರ್ಟ್ ಸಕ್೯ಲ್ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ವರೆಗೆ  ಆಗಮಿಸಿ ಮನವಿ ಸಲ್ಲಿಸಲು ಕೃಷಿ ಅಧಿಕಾರಿಗಳು, ಹೆಸ್ಕಾಂ ಅಧಿಕಾರಿಗಳು ಬಂದು ಮನವಿ ತೆಗೆದುಕೊಳ್ಳಬೇಕು ಎಂದು ರೈತರು ಆಗ್ರಹಿಸಿದರು. ರೈತರು ಸಮಸ್ಯೆಗಳ ಕುರಿತು ಅಧಿಕಾರಿಗಳಿಗೆ ಮನವಿ ನೀಡಲು ಬಂದಾಗ ರೈತರ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಅಂತಾ ದುಷ್ಟಧಿಕಾರಿಗಳ ವಿರುದ್ದ ಅಸಮಾಧಾನ ಹೋರಹಾಕಿದರು. ಇನ್ನೂ ರೈತ ಮುಖಂಡರು ಮಾತನಾಡಿ. ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ ಸಾಲಮನ್ನಾ ಮಾಡಿದ್ದೇವೆ ಎಂದು ಹೇಳುತ್ತಾರೆ. ಆದರೆ ಇದುವರೆಗೂ ಯಾವ ಬ್ಯಾಂಕಿಗೂ ಆದೇಶ ಪ್ರತಿ ಬಂದಿಲ್ಲ ಕೂಡಲೇ ಆದೇಶ ಪ್ರತಿ ನೀಡಬೇಕು. ರೈತರಿಗೆ ಬ್ಯಾಂಕ್ ನವರು ಕೊಡುವ ಕಿರುಕುಳ ನಿಲ್ಲಬೇಕು. ಧಾರವಾಡ, ಗದಗ, ಹಾವೇರಿ, ಬಳ್ಳಾರಿ, ಬಾಗಲಕೋಟದಲ್ಲಿ ಶೀಘ್ರವೇ ಹೆಸರು ಕೇಂದ್ರಗಳನ್ನು ತೆರೆಯಬೇಕು. ರೈತ ಸಂಘಕ್ಕೆ ಕಾರ್ಯ ನಿರ್ವಹಣಿ ಮಾಡಲು ಧಾರವಾಡದಲ್ಲಿ ಒಂದು ಸ್ಥಳ ಮಂಜೂರ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ರಣ್ಣ ಬಳೆಗಾರ (ರೈತ ಮುಖಂಡ )
Share News

About Shaikh BIG TV NEWS, Hubballi

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *