ಕ್ರೀಡಾಪಟು ಶಿಂಗಟಾಲೂರ ಗ್ರಾಮದ ವೀರಣ್ಣ ಸೋವೇನಹಳ್ಳಿ ಅವರು ದಶಕಗಳಿಂದ ತಾಲ್ಲೂಕಿನ ವಿವಿಧ ಶಾಲೆಗಳಿಗೆ ತೆರಳಿ ಮಕ್ಕಳಿಗೆ ಉಚಿತವಾಗಿ ಕ್ರೀಡಾ ತರಬೇತಿ ನೀಡುತ್ತಿರುವುದು ವಿಶೇಷ ಎನಿಸಿದೆ. ಈ ಮೂಲಕ ವೀರಣ್ಣ ಅವರು ಈ ಭಾಗದಲ್ಲಿ ಆಟದ ಮಾಸ್ತರ್ ಎಂದೇ ಪ್ರಖ್ಯಾತಿ.ಅವರು ಸಂಜೆ ಬಿಡುವಿನ ಸಮಯದಲ್ಲಿ ಹತ್ತಿರದ ಶಾಲೆಗಳಿಗೆ ತೆರಳಿ ಮಕ್ಕಳಿಗೆ ಉಚಿತವಾಗಿ ಕ್ರೀಡಾ ತರಬೇತಿ ನೀಡುತ್ತಿದ್ದಾರೆ. ಆ ಮೂಲಕ ಮಕ್ಕಳು ಹಾಗೂ ಕ್ರೀಡಾಭಿಮಾನಿಗಳ ಮನಗೆದ್ದಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

