ಕಳೆದ ವರ್ಷ ಕ್ವಿಂಟಲ್ ಈರುಳ್ಳಿಗೆ ₹4 ಸಾವಿರದಿಂದ ₹5,500 ಬೆಲೆ ಸಿಕ್ಕಿತ್ತು. ಹಂಗಾಗಿ ಈ ಬಾರಿ ಹೆಚ್ಚಿಗೆ ಈರುಳ್ಳಿ ಬೆಳೆದಾರ್‍ರಿ. ಆದರೆ, ಈಗ ಬೆಲೆ ಇಲ್ಲದ್ದಕ್ಕ ಬೆಳೆಗೆ ಮಾಡಿದ ವೆಚ್ಚವೂ ಕೈಸೇರುತ್ತಿಲ್ಲ’ ಎಂದು ಹಳ್ಳೂರ ಗ್ರಾಮದ ರೈತ ಬಸಲಿಂಗಪ್ಪ ರಡ್ಡೇರ ಬೇಸರ ತೋಡಿಕೊಂಡರು.ಬಾಗಲಕೋಟೆ ಎಪಿಎಂಸಿಗೆ 3 ಸಾವಿರ ಕ್ವಿಂಟಲ್ ಈರುಳ್ಳಿ ಆವಕವಾಗಿತ್ತು. ಕ್ವಿಂಟಲ್‌ಗೆ ಕನಿಷ್ಠ ₹500, ಗರಿಷ್ಠ ₹1,800 ದೊರೆತಿದೆ. ₹1,200 ಮಾದರಿ ಬೆಲೆಯಾಗಿದೆ. ಕಳೆದ ಬಾರಿ ಸಿಕ್ಕ ಬೆಲೆಗೆ ಹೋಲಿಸಿದರೆ ಈ ಬಾರಿ ಅರ್ಧಕ್ಕೂ ಕಡಿಮೆ ಬೆಲೆಗೆ ಮಾರಾಟ ಮಾಡುವಂತಾಗಿದೆ
bigtvnews | Hubli Dharwad News | Kannada News | Karnataka News Hubli News | News In Hubli | Local news

