ಕೊಲ್ಲೂರು: ಇಲ್ಲಿನ ಹೆಗ್ಡೆಹಕ್ಲು ನಿವಾಸಿ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡಿಕೊಂಡಿರುವ ಚಂದ್ರಾವತಿ ಎಂಬ ವಿಕಲಾಂಗ ಮಹಿಳೆಯೊಬ್ಬರ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ ಬಗ್ಗೆ ದೂರು ದಾಖಲಾಗಿದೆ. ಚಂದ್ರಾವತಿ ಅವರು ನೀಡಿದ ದೂರಿನ ಪ್ರಕಾರ, ತಮ್ಮ ಮನೆಯ ಸಮೀಪದ ಯಶೋಧ ಎನ್ನುವವರು ಮನೆಯ ಹತ್ತಿರ ಹೋಗುವ ದಾರಿಗೆ ಕಲ್ಲು-ಗಿಡ ಅಡ್ಡವಿಟ್ಟು, 3 ಚಕ್ರದ ಗಾಡಿ ತೆಗೆದುಕೊಂಡು ಹೋಗುವಾಗ ಚಕ್ರ ತಿರುಗಿ ಬಿಳುವ ಹಂತದಲ್ಲಿದ್ದು, ಅಡ್ಡವಿಟ್ಟ ಕಲ್ಲು ತೆಗೆಯಲು ಹೋದಾಗ, ಯಶೋಧ ಅಡ್ಡಗಟ್ಟಿ ಹಲ್ಲೆನಡೆಸಿ ಅವಾಚ್ಯವಾಗಿ ನಿಂದಿಸಿದ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news
