Breaking News

ಚಿನ್ನದ ಅಂಗಡಿ ಕಳವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ದೂರು ನೀಡಿದ್ದ ಮಾಲೀಕನೇ ಕಳ್ಳ..!

ಬೆಳಗಾವಿ: ನಗರದ ರಾಮದೇವ ಗಲ್ಲಿಯ ‘ವಿ.ಪಿ. ವೇರ್ಣೇಕರ ಮತ್ತು ಸನ್ಸ್’ ಚಿನ್ನಾಭರಣ ಮಳಿಗೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ತನಿಖೆಯಲ್ಲಿ ಅಚ್ಚರಿಯ ತಿರುವು ಸಿಕ್ಕಿದೆ. ಕಳ್ಳತನವಾಗಿದೆ ಎಂದು ದೂರು ನೀಡಿದ್ದ ಅಂಗಡಿ ಮಾಲೀಕ ಕೃಷ್ಣಾನಂದ ವಿಶ್ವನಾಥ ವೇರ್ಣೇಕರನೇ ಪ್ರಕರಣದ ಮಾಸ್ಟರ್ ಮೈಂಡ್ ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಜುಲೈ 17ರಂದು ಕಳ್ಳತನದ ದೂರು ದಾಖಲಿಸಿದ್ದ ಕೃಷ್ಣಾನಂದನ ಹೇಳಿಕೆಯಲ್ಲಿ ಅನುಮಾನ ಕಂಡ ಖಡೇಬಜಾರ್ ಪೊಲೀಸರು ಸ್ಥಳ ಪರಿಶೀಲನೆ ಹಾಗೂ ತಾಂತ್ರಿಕ ಸಾಕ್ಷ್ಯಗಳನ್ನು ಪರಿಶೀಲಿಸಿದಾಗ ಸತ್ಯ ಬಯಲಾಗಿದೆ. ವಿಚಾರಣೆ ವೇಳೆ ಆತನೇ ಚಿನ್ನ, ಬೆಳ್ಳಿ ಮತ್ತು ನಗದು ಹಣವನ್ನು ಅಡಗಿಸಿಟ್ಟಿದ್ದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿಯಿಂದ 519.8 ಗ್ರಾಂ ಚಿನ್ನಾಭರಣ, 31 ಗ್ರಾಂ ಬೆಳ್ಳಿ, ₹2.83 ಲಕ್ಷ ನಗದು ಹಾಗೂ ಕೃತ್ಯಕ್ಕೆ ಬಳಸಿದ ಸ್ಕೂಟಿಯನ್ನು ಸೇರಿ ಒಟ್ಟು ಸುಮಾರು ₹65.95 ಲಕ್ಷ ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ. ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ಶೀಘ್ರದಲ್ಲೇ ಚಾರ್ಜ್‌ಶೀಟ್ ಸಲ್ಲಿಸುವುದಾಗಿ ತಿಳಿಸಿದ್ದಾರೆ.

Share News

About BigTv News

Check Also

ಆಕಸ್ಮಿಕ ಬೆಂಕಿ: ಸ್ಕಾರ್ಪಿಯೋ ಕಾರು ಸುಟ್ಟು ಭಸ್ಮ

ವಿಜಯಪುರ: ನಿಲ್ಲಿಸಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಸುಟ್ಟು ಭಸ್ಮವಾಗಿರುವ ಘಟನೆ ನಗರದ ಸೋಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ (ಜು.18) …

Leave a Reply

Your email address will not be published. Required fields are marked *