Breaking News

ದೇವಸ್ಥಾನದ ಚೆಕ್ ನಕಲಿ ಸಹಿ ಪ್ರಕರಣ: ಡಾಟಾ ಎಂಟ್ರಿ ಆಪರೇಟರ್ ಬಂಧನ

ಕಾರ್ಕಳ: ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ಯಾಂಕ್ ಖಾತೆಯ ಚೆಕ್‌ಗಳಿಗೆ ನಕಲಿ ಸಹಿ ಮಾಡಿ ಹಣ ಪಡೆಯಲು ಯತ್ನಿಸಿದ ಆರೋಪದಡಿ ದೇವಸ್ಥಾನದ ಮಾಜಿ ಡಾಟಾ ಎಂಟ್ರಿ ಆಪರೇಟರ್ ಅಕ್ಷಯ ದೇವಾಡಿಗ (29) ಅವರನ್ನು ಕಾರ್ಕಳ ನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿ 2022ರಿಂದ 2026ರ ಮೇ 7ರವರೆಗೆ ದೇವಸ್ಥಾನದಲ್ಲಿ ಕಾರ್ಯನಿರ್ವಹಿಸಿದ್ದ. ಲೆಕ್ಕ ಪರಿಶೋಧನೆ ವೇಳೆ ಹಣಕಾಸು ಅಕ್ರಮ ಹಾಗೂ ಕರ್ತವ್ಯ ಲೋಪ ಬೆಳಕಿಗೆ ಬಂದ ಬಳಿಕ ವಿವರಣೆ ನೀಡದೆ ರಾಜೀನಾಮೆ ನೀಡಿ ಕರ್ತವ್ಯದಿಂದ ದೂರವಾಗಿದ್ದ ಎಂದು ದೂರಿನಲ್ಲಿ ಹೇಳಲಾಗಿದೆ. ಜೂನ್ 24ರಂದು ಆರು ಚೆಕ್‌ಗಳನ್ನು ನಗದೀಕರಣಕ್ಕೆ ಸಲ್ಲಿಸಿದ ವೇಳೆ ಬ್ಯಾಂಕ್ ಅಧಿಕಾರಿಗಳಿಗೆ ಅನುಮಾನ ಮೂಡಿದ್ದು, ಹಣ ಪಾವತಿಯನ್ನು ತಡೆಹಿಡಿದಿದ್ದರು. ತನಿಖೆಯಲ್ಲಿ ನಕಲಿ ಸಹಿ ಮಾಡಿ ವಂಚನೆಗೆ ಯತ್ನಿಸಿರುವುದು ಬೆಳಕಿಗೆ ಬಂದಿದ್ದು, ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Share News

About BigTv News

Check Also

ತಲವಾರು ಹಿಡಿದು ಮೊಬೈಲ್ ಅಂಗಡಿಗೆ ನುಗ್ಗಿ ಆತಂಕ ಸೃಷ್ಟಿಸಿದ ಯುವಕ

ಮೂಡುಬಿದಿರೆ: ಬಸ್ ನಿಲ್ದಾಣದ ಮೊಬೈಲ್ ಅಂಗಡಿಗೆ ಶನಿವಾರ ಮಧ್ಯಾಹ್ನ ತಲವಾರು ಹಿಡಿದು ನುಗ್ಗಿದ ಯುವಕ ಗಲಾಟೆ ನಡೆಸಿ ಕೆಲಕಾಲ ಆತಂಕದ …

Leave a Reply

Your email address will not be published. Required fields are marked *