Breaking News

ಡ್ರಗ್‌ ಪೆಡ್ಲರ್‌ಗಳ ಜತೆ ಪಾರ್ಟಿ: ಇನ್ಸ್ ಪೆಕ್ಟರ್‌ ಸೇರಿ 11 ಪೊಲೀಸರ ಸಸ್ಪೆಂಡ್

ಕಡಿಮೆ ಬೆಲೆಗೆ ಮಾತ್ರೆ ಖರೀದಿ ಮಾಡಿಸ್ತಿದ್ದ ಖಾಕಿ

ಡ್ರಗ್ ಪೆಡ್ಲರ್‌ಗಳ ಜೊತೆಗೇ ಪೊಲೀಸರ ಖಾಕಿ ನಂಟು…

ಬೆಂಗಳೂರು ಡ್ರಗ್‌ ಪೆಡ್ಲರ್‌ಗಳ ಜೊತೆ ಪಾರ್ಟಿ ಮಾಡಿದ ಆರೋಪದ ಮೇಲೆ ಬೆಂಗಳೂರಿನ ಚಾಮರಾಜಪೇಟೆ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್‌ ಸೇರಿದಂತೆ 11 ಪೊಲೀಸರನ್ನು ಅಮಾನತು ಮಾಡಲಾಗಿದೆ. ಚಾಮರಾಜಪೇಟೆ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್‌ ಟಿ ಮಂಜಣ್ಣ ಅವರನ್ನು ನಗರ ಪೊಲೀಸ್‌ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ಅವರು ಅಮಾನತುಗೊಳಿಸಿ ಆದೇಶಿಸಿದ್ದರೆ, ಉಳಿದ ಸಿಬ್ಬಂದಿಗಳನ್ನು ಡಿಸಿಪಿ ಗಿರೀಶ್‌ ಅವರು ಅಮಾನತುಗೊಳಿಸಿದ್ದಾರೆ.

ಚಾಮರಾಜಪೇಟೆ ಠಾಣೆಯ ಹೆಡ್‌ಕಾನ್ಸ್ ಸ್ಟೇಬಲ್‌ ರಮೇಶ್‌ ಶಿವರಾಜ್‌ ಹಾಗೂ ಕಾನ್ಸ್ ಸ್ಟೇಬಲ್‌ಗಳಾದ ಮಧುಸೂದನ್‌, ಪ್ರಸನ್ನ, ಶಂಕರ್‌, ಆನಂದ್‌ ಹಾಗೂ ಜೆ.ಜೆ.ನಗರ ಪೊಲೀಸ್‌ ಠಾಣೆಯ ಎಎಸ್‌‍ಐ ಕುಮಾರ್‌, ಹೆಡ್‌ ಕಾನ್ಸ್ ಸ್ಟೇಬಲ್‌ ಆನಂದ್‌, ಸಿಬ್ಬಂದಿ ಬಸವಗೌಡ ಸೇರಿ 11 ಮಂದಿಯನ್ನು ಅಮಾನತು ಮಾಡಲಾಗಿದೆ. ಸಾರ್ವಜನಿಕರನ್ನು ರಕ್ಷಣೆ ಮಾಡಬೇಕಾದ ಪೊಲೀಸರು ಈ ರೀತಿ ಕೆಲಸಗಳನ್ನು ಮಾಡಿದಾಗ ಸಾರ್ವಜನಿಕರಲ್ಲಿ ಮತ್ತಷ್ಟು ಆತಂಕ ಉಂಟಾಗುತ್ತದೆ ಪೊಲೀಸರ ಈ ಕೃತ್ಯದಿಂದ ಸಾರ್ವಜನಿಕರ ರಲ್ಲಿ ಆಕ್ರೋಶ ಹೆಚ್ಚಾಗುತ್ತಿದ್ದು ಕಾನೂನು ಕಾಪಾಡಬೇಕಾಗುತ್ತದೆ ಪೊಲೀಸರು ಈ ರೀತಿ ಮಾಡುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ. 11ಮನೆ ಪೊಲೀಸರು ನಾಮಾನತ್ತು ಮಾಡಲಾಗಿದ್ದು ಇದರಿಂದ ಆದರೂ ಪೊಲೀಸರು ಇನ್ನು ಮುಂದೆ ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ ಎಂದು ಸಾರ್ವಜನಿಕರು ನಂಬಿದ್ದಾರೆ.

Share News

About Shaikh BigTv

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *