ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹಳೆ ಚಂದಾಪುರದಲ್ಲಿ ಗ್ಯಾಂಗ್‌ವಾರ್ ವೇಳೆ ಅಮಾಯಕ ಯುವಕ ರಕ್ಷಿತ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ. ಮೀನು ತಿನ್ನಲು ಹೋಗಿದ್ದ ಆತನನ್ನು ಎದುರಾಳಿ ಗ್ಯಾಂಗ್ ಸದಸ್ಯನೆಂದು ತಪ್ಪಾಗಿ ಭಾವಿಸಿ ಲಾಂಗು-ಮಚ್ಚುಗಳಿಂದ ದಾಳಿ ಮಾಡಲಾಗಿದೆ. ಗಂಭೀರವಾಗಿ ಗಾಯಗೊಂಡ ರಕ್ಷಿತ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಬೊಮ್ಮಸಂದ್ರದ ಮಂಜುನಾಥ್ ಹಾಗೂ ಚಂದಾಪುರದ ಶಿವ ನಡುವಿನ ಹಳೆಯ ವೈಷಮ್ಯವೇ ಘಟನೆಗೆ ಕಾರಣವಾಗಿದೆ. ಶಿವನ ಗ್ಯಾಂಗ್‌ನವನನೆಂದು ತಪ್ಪಾಗಿ ಗುರುತಿಸಿದ ಆರೋಪಿಗಳು ರಕ್ಷಿತ್ ಮೇಲೆ ಹಲ್ಲೆ ನಡೆಸಿದ್ದು, ಸ್ಥಳದಲ್ಲಿದ್ದ ಎರಡು ಆಟೋಗಳಿಗೂ ಹಾನಿ ಮಾಡಿದ್ದಾರೆ. ರಕ್ಷಿತ್ ತಂದೆ, ಮಗನಿಗೆ ಯಾವುದೇ ದ್ವೇಷ ಇರಲಿಲ್ಲ ಎಂದು ಹೇಳಿ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ. ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

