ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿಯನ್ನು ಪೊಲೀಸರು ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದು 210 ಕ್ವಿಂಟಲ್ ಅಕ್ಕಿ ಜಪ್ತಿ ಮಾಡಿದ್ದಾರೆ.ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಆಜೂರ ಗ್ರಾಮದ ನಿವಾಸಿ, ಲಾರಿ ಚಾಲಕ ಗಜಾನನ ಮಕಾಳೆ ಎಂಬಾತನನ್ನು ಬಂಧಿಸಲಾಗಿದೆ.ವಿಜಯಪುರದಲ್ಲಿರುವ ಎಫ್‌ಸಿಐ ರೈಲ್ವೆ ಗೂಡ್ಸ್ ಶೆಡ್ಡಿನಿಂದ ಅಕ್ಕಿ ಸಾಗಿಸುತ್ತಿರುವುದು ಗೊತ್ತಾಗಿದೆ.ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ 4.76 ಲಕ್ಷ ರೂ. ಮೌಲ್ಯದ 210.43 ಕ್ವಿಂಟಲ್ ಅಕ್ಕಿ ಹಾಗೂ ಲಾರಿ ಸೇರಿದಂತೆ ಒಟ್ಟು 5 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

