ಕೊತ್ತಲವಾಡಿ ಸಿನಿಮಾಕ್ಕೆ ಪುಷ್ಪ ಅರುಣ್ ಕುಮಾರ್ ಅವರು ಹಣ ಹೂಡಿದ್ದರು. ಅಷ್ಟೇ ಅಲ್ಲದೆ ‘ಘಾಟಿ’ ಸಿನಿಮಾದ ವಿತರಣೆ ಕೂಡ ಮಾಡಿದ್ದರು. ಈಗ ಸಿನಿಮಾದ ಸಂಭಾವನೆ ಕೊಟ್ಟಿಲ್ಲ ಅಂತ ನಟ ಮಹೇಶ್ ಗುರು ಅವರು ಆರೋಪ ಮಾಡಿದ್ದಾರೆ.ಫೇಸ್‌ಬುಕ್‌ನಲ್ಲಿ ಅವರು ಹಾಕಿದ್ದ ವಿಡಿಯೋ ವೈರಲ್ ಆಗಿತ್ತು, ಈಗ ನೋಡಿದ್ರೆ ವಿಡಿಯೋ ಡಿಲೀಟ್ ಮಾಡಿದ್ದಾರೆ. ನಿರ್ಮಾಪಕಿ ಪುಷ್ಪ ಅವರ ಗಮನಕ್ಕೆ ತರೋದಿಕ್ಕೆ ವಿಡಿಯೋ ಮಾಡಿದ್ದೆ ಎಂದು ಮಹೇಶ್ ಹೇಳಿದ್ದಾರೆ.ನಮಗೆ ಆಗಿರೋ ಮೋಸವನ್ನು ನಿರ್ಮಾಪಕಿಗೆ ತಿಳಿಸಿ ನಮಗೆ ಆಗಿರೋ ಅನ್ಯಾಯಕ್ಕೆ ನ್ಯಾಯ ಸಿಗ್ಬೇಕು ಅನ್ನೋದೇ ನಾನು ಈ ವಿಡಿಯೋ ಮಾಡಿರೋ ಉದ್ದೇಶ ಅಷ್ಟೇ ಎಂದು ಮಹೇಶ್ ಹೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

