ಧಾರವಾಡ: ಶ್ರಾವಣಮಾಸದ ನಿಮಿತ್ತ ಧಾರವಾಡದ ಉಳವಿ ಚೆನ್ನಬಸವೇಶ್ವರ ರಥೋತ್ಸವ ಅದ್ದೂರಿಯಾಗಿ ನೆರವೇರಿತು.
ಶ್ರಾವಣಮಾಸದ ಅಂಗವಾಗಿ ಒಂದು ತಿಂಗಳ ಪರ್ಯಂತ ಉಳವಿ ಚೆನ್ನಬಸವೇಶ್ವರ ದೇವಸ್ಥಾನದ ವಿವಿಧ ಪೂಜಾ ಕಾರ್ಯಕ್ರಮ ಹಾಗೂ ಅಭಿಷೇಕಗಳು ನೆರವೇರಿದವರು. ಕೊನೆಯ ಸೋಮವಾರ ಉಳವಿ ಚೆನ್ನಬಸವೇಶ್ವರರ ರಥೋತ್ಸವ ಸಾವಿರಾರು ಭಕ್ತರ ಹರ್ಷೋದ್ಘಾರಗಳ ಮಧ್ಯೆ ವಿಜೃಂಭಣೆಯಿಂದ ನೆರವೇರಿತು.
ಉಳವಿ ಚೆನ್ನಬಸವೇಶ್ವರ ದೇವಸ್ಥಾನದಿಂದ ತೇರನ್ನು ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ವೃತ್ತದವರೆಗೂ ಎಳೆಯಲಾಯಿತು. ತೇರಿಗೆ ಭಕ್ತರು ಉತ್ತುತ್ತಿ, ನಿಂಬೆಹಣ್ಣು, ಬಾಳೆಹಣ್ಣು ತೂರಿ ಭಕ್ತಿಯ ನಮನ ಸಲ್ಲಿಸಿದರು.
ರಥೋತ್ಸವದಲ್ಲಿ ಹೆಜ್ಜೆ ಮೇಳ, ಜಾಂಜ್ ಮೇಳ, ಭಜನಾ ಮೇಳದವರೂ ಪಾಲ್ಗೊಂಡು ಜಾತ್ರಾ ಮಹೋತ್ಸವದ ಕಳೆ ಹೆಚ್ಚಿಸಿದರು. ಈ ಜಾತ್ರಾ ಮಹೋತ್ಸವದಲ್ಲಿ ಧಾರವಾಡ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರೂ ಪಾಲ್ಗೊಂಡಿದ್ದರು. ಭಕ್ತರಿಗಾಗಿ ದೇವಸ್ಥಾನದಲ್ಲಿ ಪ್ರಸಾದದ ವ್ಯವಸ್ಥೆಯನ್ನೂ ಮಾಡಲಾಗಿತ್ತು.
bigtvnews | Hubli Dharwad News | Kannada News | Karnataka News Hubli News | News In Hubli | Local news

