ತಮಿಳು ನಟ ರೋಬೋ ಶಂಕರ್ ಅವರು 46ನೇ ವಯಸ್ಸಿಗೆ ನಿಧನ ಹೊಂದಿದ್ದಾರೆ. ಅವರು ಈಗಾಗಲೇ ಧನುಶ್ ಹಾಗೂ ದಳಪತಿ ವಿಜಯ್ ಮೊದಲಾದ ಸ್ಟಾರ್ ಹೀರೋಗಳ ಜೊತೆ ಅವರು ನಟಿಸಿದ್ದಾರೆ. ಅವರ ಸಾವು ತಮಿಳು ಚಿತ್ರರಂಗಕ್ಕೆ ತುಂಬಲಾರದ ನಷ್ಟವನ್ನು ಉಂಟು ಮಾಡಿದೆ. ಅವರ ಸಾವಿಗೆ ಅನೇಕರು ಸಂತಾಪ ಸೂಚಿಸಿದ್ದಾರೆ.ರೋಬೋ ಶಂಕರ್ ಅವರು ಸೆಪ್ಟೆಂಬರ್ 16ರಂದು ಶೂಟಿಂಗ್ ಸೆಟ್ನಲ್ಲೇ ಮೂರ್ಚೆ ಹೋದರು. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಅವರಿಗೆ ಕರುಳಿನಲ್ಲಿ ರಕ್ತಸ್ರಾವ ಆಗಿತ್ತು ಎನ್ನಲಾಗಿದೆ. ಸತತ ಚಿಕಿತ್ಸೆಗಳ ಬಳಿಕವೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ.
bigtvnews | Hubli Dharwad News | Kannada News | Karnataka News Hubli News | News In Hubli | Local news

