Breaking News

ಹುಬ್ಬಳ್ಳಿ ವೀರಶೈವ ಲಿಂಗಾಯತ ಏಕತಾ ಸಮಾವೇಶ, ಒಗ್ಗಟ್ಟಿನ ವೇದಿಕೆಯಲ್ಲಿ ಭಿನ್ನಮತದ ಸ್ಫೋಟ!

ಹುಬ್ಬಳ್ಳಿಯಲ್ಲಿ ನಡೆದ ವೀರಶೈವ-ಲಿಂಗಾಯತ ಏಕತಾ ಸಮಾವೇಶವು ಒಗ್ಗಟ್ಟಿನ ಕರೆ ನೀಡಿದರೂ, ವೇದಿಕೆಯಲ್ಲೇ ಗೊಂದಲಕ್ಕೆ ಸಾಕ್ಷಿಯಾಯಿತು. ಜಾತಿ ಸಮೀಕ್ಷೆ ಮತ್ತು ಪ್ರತ್ಯೇಕ ಧರ್ಮದ ವಿಚಾರವಾಗಿ ಮುಖಂಡರ ನಡುವೆ ಭಿನ್ನಾಭಿಪ್ರಾಯ, ಬಸವರಾಜ ಬೊಮ್ಮಾಯಿ ಸೇರಿ ಹಲವರು ಆಕ್ಷೇಪ ವ್ಯಕ್ತಪಡಿಸಿದರು.ನೆಹರೂ ಮೈದಾನದಲ್ಲಿ ಭವ್ಯವಾಗಿ ಆಯೋಜಿಸಲಾಗಿದ್ದ ವೀರಶೈವ-ಲಿಂಗಾಯತ ಏಕತಾ ಸಮಾವೇಶವು ಹಲವು ಬಣ್ಣಗಳನ್ನು ತಳೆದಿತ್ತು. ಸಾವಿರಾರು ಜನರ ಸಮ್ಮುಖದಲ್ಲಿ ನಡೆದ ಈ ಸಮಾವೇಶದಲ್ಲಿ ಒಗ್ಗಟ್ಟು, ಏಕತೆ, ಪ್ರತ್ಯೇಕ ಧರ್ಮದ ಹಕ್ಕು, ಜಾತಿ ಸಮೀಕ್ಷೆ ಹಾಗೂ ಸಮಾಜದ ಸಮಸ್ಯೆಗಳ ಕುರಿತಂತೆ ಹಲವು ಮುಖಂಡರು ಮತ್ತು ಮಠಾಧೀಶರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಆದರೆ, ವೇದಿಕೆಯ ಮೇಲೂ, ಸಭಾಂಗಣದಲ್ಲೂ ಗೊಂದಲದ ವಾತಾವರಣ ಉಂಟಾಯಿತು. ವೇದಿಕೆ ಮೇಲೆ ಮಹಾರಾಷ್ಟ್ರ ಶಿವ ಸಂಘಟನೆ ಮಾತಿಗೆ ತೀವ್ರ ಆಕ್ಷೇಪ. ವೇದಿಕೆ ಮೇಲೆ ಬಸವರಾಜ ಬೊಮ್ಮಾಯಿ ಎದ್ದು ನಿಂತು ಆಕ್ಷೇಪ ವ್ಯಕ್ತಪಡಿಸಿದರು.ಜಾತಿ ಸಮೀಕ್ಷೆಯ ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬರೆಯಬಾರದು, ವೀರಶೈವ-ಲಿಂಗಾಯತ ಎಂದು ಬರೆಯಬೇಕು” ಎಂದು ಕರೆ ನೀಡಿದರು

Share News

About BigTv News

Check Also

ಸಿಸಿಬಿ ಪೊಲೀಸರ ಕಾರ್ಯಾಚರಣೆ: ಬೆಂಗಳೂರಿನಲ್ಲಿ 30 ಲಕ್ಷ ಮೌಲ್ಯದ ನಕಲಿ ಸಿಗರೇಟ್ ಜಪ್ತಿ

ಬೆಂಗಳೂರು: ಸಿಸಿಬಿ ಹಾಗೂ ಉಪ್ಪಾರಪೇಟೆ ಪೊಲೀಸರು ಪ್ರತ್ಯೇಕ ಕಾರ್ಯಾಚರಣೆ ನಡೆಸಿ ಒಟ್ಟು ₹30 ಲಕ್ಷ ಮೌಲ್ಯದ ನಕಲಿ ಸಿಗರೇಟ್‌ಗಳನ್ನು ಜಪ್ತಿ …

Leave a Reply

Your email address will not be published. Required fields are marked *