ಗೋಗಿ (ಶಹಾಪುರ): ಮಾರ್ಚ್ 14ರಿಂದ ಚಂದಾಹುಸೇನಿ ದರ್ಗಾ 585ನೇ ಉರುಸ್ ತಾಲ್ಲೂಕಿನ ಗೋಗಿ ಗ್ರಾಮದಲ್ಲಿ (ಜಾತ್ರಾ ಮಹೋತ್ಸವ) ಆರಂಭವಾಗಲಿದೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ದರ್ಗಾದ ಪೀಠಾಧಿಪತಿ ಸಯ್ಯದಶಾಹ ಮಹ್ಮದ ಹುಸೇನಿ ಸಜ್ಜಾದನಷಿನ್ ಬುಜರಗ್ ತಿಳಿಸಿದ್ದಾರೆ.
ಸೋಮವಾರ ಗಂಧ, ಮಂಗಳವಾರ ದೀಪ ಹಾಗೂ ಬುಧವಾರ ಜಿಯಾರತ್ ನೆರವೇರಲಿದೆ. ಅಲ್ಲದೆ ಉರುಸ್ ಅಂಗವಾಗಿ ಸೋಮವಾರ ಗೋಗಿ ಗ್ರಾಮದಲ್ಲಿ ಮನ್ಸೂರ ಹಾಗೂ ಸ್ಪಂದನ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

