ಹಿಂದೂ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ಮಾಡಿಸಿಕೊಂಡು ಮುಸ್ಲಿಂ ವ್ಯಕ್ತಿಯೋರ್ವ ಹಿಂದೂ ಮಹಿಳೆಯನ್ನು ಲಾಡ್ಜ್ ಗೆ ಕರೆದೊಯ್ದು ಸಿಕ್ಕಿಬಿದ್ದಿದ್ದಾನೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ಜೋಡಿ ಸಿಕ್ಕಿಬಿದ್ದಿದೆ.ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಮೂಲದ ಮಾಗುಂಡಿಯ ಅಬ್ದುಲ್ ಸಮದ್ ಎನ್ನುವಾತ ಆಧಾರ್ ಕಾರ್ಡ್ ನಲ್ಲಿ ರಮೇಶ್ ಎಂದು ಎಡಿಟ್ ಮಾಡಿ ಶೃಂಗೇರಿ ಮಠದಲ್ಲಿ ರೂಮ್ ಪಡೆದುಕೊಂಡಿದ್ದಾನೆ. ಅದು ಒಬ್ಬನ್ನೇ ಹೋಗಿಲ್ಲ ಶೃಂಗೇರಿ ಮೂಲದ 38 ವರ್ಷದ ಮಹಿಳೆಯನ್ನು ತನ್ನ ಹೆಂಡತಿ ಎಂದು ಸುಳ್ಳು ಹೇಳಿ ರೂಮ್ ಪಡೆದುಕೊಂಡಿದ್ದಾನೆ. ಸದ್ಯ ಇಬ್ಬರನ್ನು ಶೃಂಗೇರಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

