ತಾಶು ಗುಪ್ತಾ ಎಂಬ ಮಹಿಳೆ ಮಂಗಳವಾರ ಬೊಟಾನಿಕಲ್ ಗಾರ್ಡನ್ ನಿಂದ ಸೆಕ್ಟರ್ 128ಕ್ಕೆ ಉಬರ್ ಕ್ಯಾಬ್ ವೊಂದನ್ನು ಬುಕ್ ಮಾಡಿದ್ದಾರೆ. ಅವರೊಂದಿಗೆ ಇತರ ನಾಲ್ವರು ಗೆಳತಿಯರು ಕೂಡಾ ಜೊತೆಯಲ್ಲಿದ್ದರು. ಕಾರು ಉತ್ತರ ಪ್ರದೇಶ ನೋಂದಣಿಯದ್ದಾಗಿತ್ತು. ಟ್ರಾಫಿಕ್ ನಿಂದ ತಪ್ಪಿಸಿಕೊಳ್ಳಲು ಯೂ ಟರ್ನ್ ಬದಲಿಗೆ ಅಂಡರ್ ಪಾಸ್ ನಲ್ಲಿ ತೆರಳುವಂತೆ ಚಾಲಕ ಬ್ರಜೇಶ್ ಗೆ ಗುಪ್ತಾ ಮನವಿ ಮಾಡಿದಾಗ ಮಾತಿನ ಚಕಮಕಿ ಉಂಟಾಗಿದೆ.
ಆಕೆಯ ಮಾತನ್ನು ತಲೆಗೆ ಹಾಕಿಕೊಳ್ಳದ ಡ್ರೈವರ್ ಉದ್ಧಟತನಿಂದ ವರ್ತಿಸಿದ್ದಾನೆ. ಯಾವುದೇ ಪ್ರಚೋದನೆ ಇಲ್ಲದೆ ಡ್ರೈವರ್ ಕೆಟ್ಟ ರೀತಿಯಲ್ಲಿ ವರ್ತಿಸಿರುವುದಾಗಿ ಗುಪ್ತಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಶ್ಲೀಲ ಪದಗಳಿಂದ ನಿಂದಿಸಿದ್ದು, ರಾಡ್ ನಿಂದ ಹೊಡೆಯಲು ಪ್ರಯತ್ನಿಸಿದ್ದಾನೆ ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಆರೋಪಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

