Breaking News

ಪ್ಲೇಹೋಮ್‌ನಲ್ಲಿ 3 ವರ್ಷದ ಕಂದನ ಮೇಲೆ ಶಿಕ್ಷಕಿಯ ಹಲ್ಲೆ: ವೀಡಿಯೋ ವೈರಲ್ ಬಳಿಕ ಪೋಷಕರ ಗಮನಕ್ಕೆ ಘಟನೆ.

ಹಾಡನ್ನು ಹಾಡುವಾಗ ಚಪ್ಪಾಳೆ ತಟ್ಟಿ ಹಾಡಲಿಲ್ಲ ಎಂಬ ಕಾರಣಕ್ಕೆ ಈ ಪುಟ್ಟ ಕಂದನ ಕೆನ್ನೆಗೆ ಬಾರಿಸಿ ಹಲ್ಲೆ ಮಾಡಲಾಗಿದೆ. ಥಾಣೆಯ ಉಲ್ಲಾಸ್‌ನಗರದ ಪ್ಲೇಹೋಮೊಂದರಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ವೈರಲ್ ಆದ ವೀಡಿಯೋದಲ್ಲಿ ಶಿಕ್ಷಕಿ ಎರಡೆರಡು ಬಾರಿ ಮಗುವಿನ ಕೆನ್ನೆಗೆ ಬಾರಿಸುವುದನ್ನು ಕಾಣಬಹುದಾಗಿದೆ. ಘಟನೆಗೆ ಸಂಬಂಧಿಸಿದಂತೆ ಈಗ ಶಿಕ್ಷಕಿ ವಿರುದ್ಧ ಪ್ರಕರಣ ದಾಖಲಾಗಿದೆ. ಮಗುವಿನ ಮೇಲೆ ಶಿಕ್ಷಕಿ ಹಲ್ಲೆ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಪೊಲೀಸರ ಪ್ರಕಾರ ಈ ಘಟನೆ ಆಗಸ್ಟ್ 7 ರಂದು ಉಲ್ಲಾಸ್ನಗರದ ಕ್ಯಾಂಪ್ ಸಂಖ್ಯೆ 4ರಲ್ಲಿ ಇರುವ ಎಕ್ಸ್‌ಲೆನ್ಸ್ ಕಿಡ್ಸ್‌ ವರ್ಲ್ಡ್‌ ಹೆಸರಿನ ಶಾಲೆಯಲ್ಲಿ ನಡೆದಿದೆ. ದಾಶ್ ಮೆಂಗಾನಿ ಎಂದು ಗುರುತಿಸಿದ ಮಗುವಿನ ಮೇಲೆ ಶಿಕ್ಷಕಿ ಹಲ್ಲೆ ಮಾಡಿದ್ದಾಳೆ.

Share News

About BigTv News

Check Also

ಬೆಂಗಳೂರು | ಸಿಕ್ಕವರ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು: ಎಂಟು ಮಂದಿಗೆ ಗಾಯ

ಬೆಂಗಳೂರು: ಮಾಸ್ಕ್ ಧರಿಸಿ ನಾಲ್ಕು ಬೈಕ್‌ಗಳಲ್ಲಿ ಬಂದಿದ್ದ ಎಂಟು ಮಂದಿ ದುಷ್ಕರ್ಮಿಗಳು ಉತ್ತರಹಳ್ಳಿ ಮುಖ್ಯರಸ್ತೆ ಹಾಗೂ ಅರಹಳ್ಳಿ ಗೇಟ್ ಬಳಿ …

Leave a Reply

Your email address will not be published. Required fields are marked *