Breaking News

ರೋಗಿಯ ಹೊಟ್ಟೆಯಲ್ಲಿ ಇತ್ತು ಬರೋಬ್ಬರಿ 29 ಚಮಚ, 19 ಟೂತ್ ಬ್ರಶ್, 2 ಪೆನ್ !

ಉತ್ತರ ಪ್ರದೇಶದ ಗಾಜಿಯಾಬಾದ್‌ನ ಡಿ ಅಡಿಕ್ಷನ್ ಸೆಂಟರ್‌ನಲ್ಲಿ ರೋಗಿಯೊಬ್ಬರ ಹೊಟ್ಟೆಯಲ್ಲಿದ್ದ ಚಮಚ, ಟೂತ್ ಬ್ರಶ್, ಪೆನ್ ನನ್ನು ವೈದ್ಯರು ಯಶಸ್ವಿ ಶಸ್ತ್ರ ಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ.ವ್ಯಕ್ತಿ ಸ್ಟೀಲ್ ಚಮಚಗಳನ್ನು ಕದ್ದು ನುಂಗಿದ್ದ. ಸ್ವಲ್ಪ ದಿನಗಳ ಬಳಿಕ ಆತನಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಎಕ್ಸ್ ರೇ ಮತ್ತು ಸಿಟಿ ಸ್ಕ್ಯಾನ್‌ಗಳ ಮೂಲಕ ಆತನ ಹೊಟ್ಟೆಯಲ್ಲಿ 29 ಚಮಚ, 19 ಟೂತ್ ಬ್ರಶ್‌ ಮತ್ತು ಎರಡು ಪೆನ್‌ಗಳು ಇರುವುದಾಗಿ ಕಂಡುಬಂದಿತ್ತು. ವಸ್ತುಗಳ ಪ್ರಮಾಣ ಹೆಚ್ಚಾಗಿದ್ದರಿಂದ ಎಂಡೋಸ್ಕೋಪಿ ಮೂಲಕ ಅವುಗಳನ್ನು ಹೊರತೆಗೆಯುವ ಪ್ರಯತ್ನ ವಿಫಲವಾಯಿತು. ನಂತರ ಸಚಿನ್‌ಗೆ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಲಾಯಿತು.

ದಿನದಲ್ಲಿ ನಮಗೆ ಅತೀ ಕಡಿಮೆ ತರಕಾರಿ ಮತ್ತು ಕೆಲವು ಚಪಾತಿಗಳನ್ನು ಮಾತ್ರ ನೀಡುತ್ತಿದ್ದರು. ಮನೆಯಿಂದ ಏನಾದರೂ ಬಂದರೂ, ಹೆಚ್ಚಿನವು ನಮಗೆ ತಲುಪುತ್ತಿರಲಿಲ್ಲ. ಕೆಲವೊಮ್ಮೆ ದಿನಕ್ಕೆ ಒಂದು ಬಿಸ್ಕತ್ತು ಮಾತ್ರ ಸಿಗುತ್ತಿತ್ತು” ಎಂದು ಸಚಿನ್ ಹೇಳಿದ್ದಾನೆ.

Share News

About BigTv News

Check Also

ಉಡುಪಿ: ಮದುವೆ ನಿರಾಕರಿಸಿದ ವ್ಯಕ್ತಿಯನ್ನು ಬೆದರಿಸಿ 42ಲಕ್ಷ ರೂ. ಹಣ ವಸೂಲಿ; ಶಿಕ್ಷಕಿ ಸಹಿತ ಇಬ್ಬರ ಬಂಧನ

ಉಡುಪಿ: ಮದುವೆ ಪ್ರಸ್ತಾಪ ನಿರಾಕರಿಸಿದ ವ್ಯಕ್ತಿಗೆ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಸಿ ₹42.97 ಲಕ್ಷ ವಸೂಲಿ ಮಾಡಿ ವಂಚಿಸಿದ ಆರೋಪದಲ್ಲಿ …

Leave a Reply

Your email address will not be published. Required fields are marked *