ಧಾರವಾಡ: “ಸೈನಿಕ” ಎಂಬ ಹೆಸರಿನ ಮೇಲೆ ಮೆಸ್ ನಡೆಸುವ ಮಾಜಿ ಸೈನಿಕನ ಮೇಲೆ ಪೊಲೀಸರು ಮನಸೋಇಚ್ಛೆ ಹಲ್ಲೆ ನಡೆಸಿದ್ದಾರೆ. ಧಾರವಾಡದ ಸಪ್ತಾಪುರದ ಸ್ವಾಮಿ ವಿವೇಕಾನಂದ ಸರ್ಕಲ್ ಬಳಿಯ ಡಾಲ್ಫಿನ್ ಹೋಟೆಲ್ ಪಕ್ಕದಲ್ಲೇ ಇರುವ ಸೈನಿಕ ಮೆಸ್ನಲ್ಲಿ ಈ ಘಟನೆ ನಡೆದಿದೆ.ಮೆಸ್ ನಡೆಸುವ ಮಾಜಿ ಸೈನಿಕ ರಾಮಪ್ಪ ನಿಪ್ಪಾಣಿ ಎಂಬುವವರ ಮೇಲೆಯೇ ನಾಲ್ಕೈದು ಜನ ಪೊಲೀಸರು ಹಾಗೂ ಓರ್ವ ಎಎಸ್ಐ ಸೇರಿಕೊಂಡು ಹೆಲ್ಮೆಟ್, ಲಾಠಿ ಸೇರಿದಂತೆ ಇತರ ವಸ್ತುಗಳಿಂದ ಮನಸೋಇಚ್ಛೆ ಹಲ್ಲೆ ನಡೆಸಿದ್ದಾರೆ. ಪರಿಣಾಮ ಮಾಜಿ ಸೈನಿಕ ರಾಮಪ್ಪ ತೀವ್ರವಾಗಿ ಗಾಯಗೊಂಡು ಇದೀಗ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

