ಪೇಕ್ ಪೇಕ್ ಪೇಕ್ FIR ಕಹಾನಿ ಏನಾಗಿದೆ ಗೊತ್ತಾ..?ಹುಬ್ಬಳ್ಳಿ: MLA ಪ್ರಸಾದ ಅಬ್ಬಯ್ಯ ಸಾಹೆಬ್ರೆ ನೋಡಿ….. ನಿಮ್ಮ ಪೂರ್ವ ಕ್ಷೇತ್ರದಲ್ಲಿ ಬರುವ ಕಸಬಾ ಪೊಲೀಸಠಾಣೆಯಲ್ಲಿ ಪೊಲೀಸ್ ಅಧಿಕಾರಿಗಳೇ ಸುಳ್ಳು ಸುಳ್ಳು ಪ್ರಕರಣ ಮಾಡ್ತಿದ್ದಾರೆ. ಆದ್ರೆ ಈ ಬಗ್ಗೆ ಸುದ್ದಿ ಮಾಡುವುದರ ಮೂಲಕ ಪ್ರಕರಣ ಹೊರ ಹಾಕಿದ್ರೆ… ಇತ್ತ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಅವರು, ತನಿಖೆ ನಡೆಸುತ್ತಿದ್ದೇವೆಂದು ಹೇಳ್ತಿದ್ದಾರೆ ಹೊರತು… ಇಲ್ಲಿಯವರೆಗೂ ನೋ ಎನ್‌ಕ್ವರಿ, ನೋ ಆ್ಯಕ್ಷನ್…ಹೌದು,,,, ಹುಬ್ಬಳ್ಳಿಯ ಕಸಬಾ ಪೊಲೀಸ್ ಠಾಣೆಯಲ್ಲಿ ನಡೆದ ಫೇಕ್ ಎಫ್ಐಆರ್ ಪ್ರಕರಣವನ್ನು, ಸಾಕ್ಷಿ ಸಮೇತ ಬಿಗ್ ಟಿವಿ ನ್ಯೂಸ್ ಹೊರ ಹಾಕುತ್ತಿದ್ದಂತೆ
ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಅವರು ತನಿಖೆಯ ಹೊಣೆಯನ್ನು ಎಸಿಪಿ ವಿಜಯಕುಮಾರ ತಳವಾರ ಅವರಿಗೆ ನೀಡಿದ್ದರು. ಆದ್ರೆ ಈ ವರೆಗೂ ತನಿಖೆ ಏನಾಯ್ತು ಎಲ್ಲಿಗೆ ಬಂತು ಎಂಬುದು ತಿಳಿಯುತ್ತಿಲ್ಲ. ಜುಲೈ 14 ರಂದು ರಾತ್ರಿವೇಳೆ ಹುಬ್ಬಳ್ಳಿಯ ಕಸಬಾ ಪೊಲೀಸ್ ಠಾಣೆಯಲ್ಲಿ ಆರೋಪಿಗಳಿಲ್ಲದೆ ಅಲ್ಲಿನ ಠಾಣಾಧಿಕಾರಿಗಳು ಮತ್ತು ಕೆಲ ಪೊಲೀಸ್ ಸಿಬ್ಬಂದಿ ಸೇರಿಕೊಂಡು, ಅಕ್ರಮ ಚಟುವಟಿಕೆ ಮಾಡುತ್ತಿದ್ದಾರೆಂದು ಸುಳ್ಳು ಎಫ್ಐಆರ್ ಮಾಡುತ್ತಾರೆ. ಅಷ್ಟೇ ಅಲ್ದೆ ಜಾಮೀನು ದಾರರಿಲ್ಲದ ಸ್ಟೇಷನ್ ಜಾಮೀನು ಕೂಡ ಕೊಡುತ್ತಾರೆ. ಈ ಬಗ್ಗೆ ಎಲ್ಲ ದಾಖಲೆಗಳನ್ನು ಇಟ್ಟುಕೊಂಡು ಬಿಗ್ ಟಿವಿ ನ್ಯೂಸ್ ಸುದ್ದಿಯನ್ನು ಬಿತ್ತರಿಸಿತ್ತು. ಸುದ್ದಿಯನ್ನು ನೋಡಿದ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಅವರು ತನಿಖೆ ಮಾಡ್ತಿದ್ದೇವೆಂದು ಹೇಳಿದ್ರು..
ಎಸ್… ಕಮೀಷನರ್ ರೇಣುಕಾ ಸುಕುಮಾರ ಅವರೇ ತನಿಖೆ ಮಾಡ್ತಿದ್ದೇವೆಂದು ಹೇಳಿದ್ದರು. ಆದ್ರೆ ಎಲ್ಲ ದಾಖಲೆಗಳು ಇದ್ರು ಕೂಡ ತನಿಖೆ ಇನ್ನೂ ಯಾಕೆ ಚುರುಕುಗೊಂಡಿಲ್ಲ ಎಂಬುದು ಸಾರ್ವಜನಿಕರಲ್ಲಿ ಸಂಶಯ ಮೂಡಿದೆ. ಯಾರಾದ್ರು ರಾಜಕೀಯಕ್ಕೆ ಮಣಿತಾ ಇದಾರಾ…? ಅಷ್ಟೇ ಅಲ್ದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕೀಯ ನಾಯಕರು ಕೂಡ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯ ಮಾಡಿದ್ರು… ಆದ್ರೆ ಏನು ಪ್ರಯೋಜನ ಇನ್ನೂವರೆಗೂ ನೋ ಆ್ಯಕ್ಷನ್…. ನೋ ಎನ್‌ಕ್ವರಿ… ಮೊದಲು ಅದೇ ಪೊಲೀಸ್ ಇಲಾಖೆಯಲ್ಲಿ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾದವರನ್ನು ತನಿಖೆ ಮಾಡಿ ಸಸ್ಪೆಂಡ್ ಮಾಡಿದ್ದುಂಟು, ಆದ್ರೆ

ಕಸಬಾ ಪೊಲೀಸ್ ಠಾಣೆಯಲ್ಲಿ ಬೇಜವಾಬ್ದಾರಿತನ ಮಾಡಿದ ಈ ಪ್ರಕರಣವನ್ನು, ಈ ಕಮೀಷನರ್ ತನಿಖೆ ಮಾಡಲು ಯಾಕೆ ಹಿಂಜೆರಿಯುತ್ತಿದ್ದಾರೆಂಬುದು ತಿಳಿಯುತ್ತಿಲ್ಲ. ಪೂರ್ವ ಕ್ಷೇತ್ರದ ಶಾಸಕರು ಪ್ರಸಾದ ಅಬ್ಬಯ್ಯ ಅವರು ಈ ಫೇಕ್ ಎಫ್ಐಆರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗಮನ ಹರಿಸಬೇಕಿದೆ. ಈಗಲಾದರೂ

ನಮ್ಮ DG ಸಾಹೇಬ್ರು ಈ ಪ್ರಕರಣದ ಮೇಲೆ ಸೂಕ್ತವಾಗಿ ತನಿಖೆ ಮಾಡಿ ತಪ್ಪಿತಸ್ತರ ಮೇಲೆ ಕ್ರಮ ಕೈಗೊಳ್ಳುತ್ತಾರೆ ಎಂಬ ಭರವಸೆ ಇದೆ. ಇದು ಭರವಸೆ ಆಗುತ್ತಾ..? ಅಥವಾ ಹಾಗೆ ಉಳಿಯುತ್ತಾ ಕಾದು ನೋಡೋಣ….!

MLA ಪ್ರಸಾದ ಅಬ್ಬಯ್ಯ ಸಾಹೆಬ್ರೆ ನೋಡಿ….. ನಿಮ್ಮ ಪೂರ್ವ ಕ್ಷೇತ್ರದಲ್ಲಿ ಬರುವ ಕಸಬಾ ಪೊಲೀಸಠಾಣೆಯಲ್ಲಿ ಪೊಲೀಸ್.. ಪೇಕ್ ಪೇಕ್ ಪೇಕ್ FIR ಕಹಾನಿ ಏನಾಗಿದೆ ಗೊತ್ತಾ..?
bigtvnews | Hubli Dharwad News | Kannada News | Karnataka News Hubli News | News In Hubli | Local news

