Breaking News

ಮಂಗಳೂರು :ಕಾರುಗಳ ಪರಸ್ಪರ ಢಿಕ್ಕಿ; ಮಹಿಳೆಗೆ ಗಾಯ!!

ಮನೋಜ್‌ ಕುಮಾರ್‌ ಶೆಟ್ಟಿ ಅವರು ಮೊಮ್ಮಗ ಅಧೋಕ್ಷ್, ಹಿಂದಿನ ಸೀಟಿನಲ್ಲಿ ಅಕ್ಕ ಸುನೀತಾ ಡಿ.ಶೆಟ್ಟಿ ಮತ್ತು ಪತ್ನಿ ಸಹನಾ ಅವರೊಂದಿಗೆ ಲೇಡಿಹಿಲ್‌ನಿಂದ ಪಿವಿಎಸ್‌ ಕಾರಿನಲ್ಲಿ ಕಡೆಗೆ ಬರುತ್ತಿದ್ದಾಗ ಲಾಲ್‌ ಬಾಗ್‌ ಜಂಕ್ಷನ್‌ನಲ್ಲಿ ಬಲ್ಲಾಳ್‌ಬಾಗ್‌ ಕಡೆಯಿಂದ ಕೆಎಸ್‌ಆರ್‌ಟಿಸಿ ಕಡೆಗೆ ಸಾಗುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ.ಕಾರು ಚಾಲಕ ವಿಶಾಂತ್‌ ಕುಮಾರ್‌ ಎಂಬಾತ ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಢಿಕ್ಕಿ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ. ಎರಡೂ ಕಾರುಗಳ ಮುಂಭಾಗ ಜಖಂಗೊಂಡಿದ್ದು, ಸುನೀತಾ ಶೆಟ್ಟಿ ಅವರಿಗೆ ಹಣೆಗೆ ಗುದ್ದಿದ ಗಾಯವಾಗಿದೆ. ಈ ಬಗ್ಗೆ ಪಶ್ಚಿಮ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಟಿ. ನರಸೀಪುರ: ಹಾಡಹಗಲೇ ಯುವಕನ ಬರ್ಬರ ಕೊಲೆ; ಠಾಣೆಗೆ ಹಾಜರಾದ ಮೂವರು ಆರೋಪಿಗಳು

ಟಿ.ನರಸೀಪುರದ ವಿವೇಕನಗರದಲ್ಲಿ ಶನಿವಾರ ಬೆಳಗ್ಗೆ 9.30ರ ಸುಮಾರಿಗೆ ಸುಭಾಷ್ (34) ಎಂಬ ಯುವಕನನ್ನು ಮೂವರು ಆರೋಪಿಗಳು ಡ್ರ್ಯಾಗರ್‌ ಮತ್ತು ಚೂರಿಯಿಂದ …

Leave a Reply

Your email address will not be published. Required fields are marked *