ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯನ್ನು ಭೀಕರವಾಗಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಕೋ ಕಿಲ್ಲರ್ ವಿಘ್ನೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.ಯುವತಿ ಯಾಮಿನಿ ಕೊಲೆ ಪ್ರಕರಣದಲ್ಲಿ ಸದ್ಯ ಶ್ರೀರಾಂಪುರ ಪೊಲೀಸರು ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ.
ಮುಖ್ಯ ಆರೋಪಿ ವಿಘ್ನೇಶ್ ಜೊತೆ ಹರೀಶ್ ಕೂಡ ಬಂಧನ.ಕೊಲೆಯ ನಂತರ ಹರೀಶ್ ಬೈಕ್‌ನಲ್ಲಿ ವಿಘ್ನೇಶ್‌ನ್ನು ಸೋಲದೇವನಹಳ್ಳಿಗೆ ಕರೆದೊಯ್ದಿದ್ದ.
ಪೊಲೀಸರು ರಾತ್ರಿ ಇಡೀ ಕಾರ್ಯಾಚರಣೆ ನಡೆಸಿ, 14 ಗಂಟೆಯೊಳಗೆ ಇಬ್ಬರನ್ನೂ ಹಿಡಿದಿದ್ದಾರೆ.ವಿಘ್ನೇಶ್ ಯಾಮಿನಿಗೆ ಬಲವಂತವಾಗಿ ಮಾಂಗಲ್ಯ ಕಟ್ಟಿದ್ದನಂತೆ,
ಮನೆಯಲ್ಲಿ ತಿಳಿಸಿದರೆ ಕೊಲೆ ಮಾಡ್ತೇನೆ ಎಂದು ಬೆದರಿಸಿದ್ದ.ಯಾಮಿನಿ ಪ್ರೀತಿಯನ್ನು ನಿರಾಕರಿಸಿದ್ದರಿಂದ ಕೋಪಗೊಂಡ ವಿಘ್ನೇಶ್,
ಆಕೆಯ ಚಲನೆಯನ್ನು ಗಮನಿಸಿ ಕಾಲೇಜಿನಿಂದ ಮನೆಗೆ ಬರುವಾಗ ಕೊಲೆ ಮಾಡಿದನೆಂದು ಮಾಹಿತಿ.
bigtvnews | Hubli Dharwad News | Kannada News | Karnataka News Hubli News | News In Hubli | Local news

