Breaking News

ಮತ ಕಳವು ಸಾಕ್ಷ್ಯಕ್ಕೆ ಹಳ್ಳದಲ್ಲಿ ಶೋಧ! ಸುಟ್ಟ ಸ್ಥಿತಿಯಲ್ಲಿ ರಾಶಿ ರಾಶಿ ವೋಟರ್‌ ಐಡಿಗಳು

ಕಲಬುರ್ಗಿಯ ಆಳಂದ ತಾಲೂಕಿನ ವಿಧಾನಸಭೆ ಚುನಾವಣೆಯಲ್ಲಿ ಮತ ಕಳವು ನಡೆದಿದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಶೋಧಕ್ಕೆ ಇಳಿದಿದ್ದ ಎಸ್‌ಐಟಿ ತಂಡದ ಅಧಿಕಾರಿಗಳು ಶುಕ್ರವಾರ ತಡರಾತ್ರಿ ಮತ್ತು ಶನಿವಾರ ಬೆಳಗಿನ ಜಾವ ಹಳ್ಳದ ದಂಡೆಯಲ್ಲೂ ದಾಖಲೆಗಳಿಗಾಗಿ ಹುಡುಕಾಟ ನಡೆಸಿದ್ದಾರೆ.ಅಲ್ಲಿ ರಾಶಿ-ರಾಶಿ ವೋಟರ್‌ ಐಡಿಗಳು, ಮತಪಟ್ಟಿಗಳು ಸುಟ್ಟ ಸ್ಥಿತಿಯಲ್ಲಿ ಸಿಕ್ಕಿವೆ ಎಂದು ಹೇಳಲಾಗುತ್ತಿದೆ.ಮತಪಟ್ಟಿ ಹಾಗೂ ವೋಟರ್‌ ಕಾರ್ಡ್‌ ಗಳ ಮಾಹಿತಿ ಇರುವ ಕಾಗದಗಳನ್ನು ಸುಡಲು ಮೊದಲು ವಾಹನ ಬಳಕೆ ಮಾಡಲಾಗಿತ್ತು. ಆಗ ಬೆಂಕಿ ದೊಡ್ಡ ಮಟ್ಟದಲ್ಲಿ ಕಾಣಿಸಿದ್ದಲ್ಲದೆ,
ಹಾದಿರಂಪ, ಬೀದಿರಂಪ ಆದೀತು ಎನ್ನುವ ಭಯದಿಂದ ಬೆಂಕಿ ಆರಿಸಿ, ಕಾಗದಗಳನ್ನು ಮಾಜಿ ಶಾಸಕರ ಮನೆ ಸಮೀಪದಿಂದ ಟಾಟಾ ಏಸ್‌ ವಾಹನದಲ್ಲಿ ಹಳ್ಳದ ದಂಡೆಗೆ ತಂದು ಎಸೆಯಲಾಗಿತ್ತು. ಈ ವೇಳೆ ಕಾಂಗ್ರೆಸ್‌ ಕಾರ್ಯಕರ್ತರು ಬೆನ್ನಟ್ಟಿದ್ದರಿಂದ ಸ್ಥಳದಲ್ಲಿಯೇ ಬಿಟ್ಟು ವಾಹನ ಚಾಲಕ ಪರಾರಿಯಾಗಿದ್ದ. ಈಗ ಆ ವಾಹನವನ್ನು ಎಸ್‌ಐಟಿ ತಂಡ ವಶಕ್ಕೆ ಪಡೆದಿದೆ ಎಂದು ಮೂಲಗಳು ತಿಳಿಸಿವೆ.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *