ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪ್ರತಿಷ್ಠಿತ ಚಿನ್ನಾಭರಣಗಳ ಹಾಗೂ ಎಲೆಕ್ಟ್ರಾನಿಕ್ ಅಂಗಡಿಗಳಿಗೆ ಭೇಟಿ ಮಾಡಿ ತನ್ನ ಮಾತುಗಳಿಂದ ಅಂಗಡಿ ಮಾಲಕರನ್ನು ನಂಬಿಸಿ, ಬೆಲೆಬಾಳುವ ಸೊತ್ತುಗಳನ್ನು ಖರೀದಿಸಿ, ವಿವಿಧ ಬ್ಯಾಂಕ್ ಗಳ ಮಾನ್ಯತೆ ಇಲ್ಲದ ಚೆಕ್ ಗಳನ್ನು ನೀಡಿ ಮೋಸ ಮಾಡುತ್ತಿದ್ದಖತರ್ನಾಕ್ ವಂಚಕಿಯನ್ನು ಬರ್ಕೆ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಮಂಗಳೂರು ತಾಲೂಕು ಕುಪ್ಪೆ ಪದವು ಮುತ್ತೂರು ಗ್ರಾಮದ ಮುರಾ ಹೌಸ್ ನಿವಾಸಿ ರಮೀಜ್ ರಾಜ್ ಎಂಬಾತನ ಪತ್ನಿ ಫರಿದಾ ಬೇಗಂ ಯಾನೆ ಫರಿದಾ (28) ಬಂಧಿತ ಆರೋಪಿ. ರವಿವಾರ ಆಕೆಯನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದ್ದು, ನ್ಯಾಯಾಧೀಶರು ಆಕೆಗೆ ನ.3ರ ವರೆಗೆ ನ್ಯಾಯಾಗಂ ಬಂಧನ ವಿಧಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

