Breaking News

ಹಾವೇರಿ – ನೀರು ತುಂಬಿದ್ದ ಬಕೆಟ್ ಗೆ ಬಿದ್ದು ಮಗು ಸಾವು

ಮನೆಯ ಎದುರು ನೀರು ತುಂಬಿಟ್ಟಿದ್ದ ಬಕೆಟ್ ಗೆ ಬಿದ್ದು ಅಸ್ವಸ್ಥಗೊಂಡಿದ್ದ 14 ತಿಂಗಳ ಮಗು ಹಾವೇರಿ‌ ಜಿಲ್ಲಾಸ್ಪತ್ರೆಯಲ್ಲಿ ಗುರುವಾರ ರಾತ್ರಿ ಮೃತಪಟ್ಟಿದೆ.ದಕ್ಷಿತ್ ಎಂಬ ಮಗು ಮನೆಯ ಮುಂಭಾಗದಲ್ಲಿ ಅಕ್ಟೋಬರ್ 19ರಂದು ಆಟವಾಡುತ್ತಿತ್ತು.ಮನೆಯ ಎದುರು ನೀರು ತುಂಬಿದ್ದ ಬಕೆಟ್‌ನಲ್ಲಿ ತಲೆ ಕೆಳಗಾಗಿ ಮಗು ಬಿದ್ದಿತ್ತು. ಅಲ್ಲಿಯೇ ಪ್ರಜ್ಞೆ ತಪ್ಪಿತ್ತು. ಬಕೆಟ್‌ನಲ್ಲಿ ಮಗುವಿನ ಕಾಲು ನೋಡಿದ್ದ ಪೋಷಕರು ಹಾಗೂ ಸ್ಥಳೀಯರು, ಮಗುವನ್ನು‌ ಮೇಲಕ್ಕೆ ಎತ್ತಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿಯೇ ಚಿಕಿತ್ಸೆಗೆ ಸ್ಪಂದಿಸದೇ ಮಗು ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದರು. ಈ ಅವಘಡದ ಬಗ್ಗೆ ಹಾವೇರಿ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಹುಬ್ಬಳ್ಳಿ ಸಿದ್ಧಾರೂಢ ಮಠದ ಬಳಿ ಮಹಿಳೆ ಮೇಲೆ ಅತ್ಯಾಚಾರ ಆರೋಪ ಪ್ರಕರಣ ದಾಖಲು

ಹುಬ್ಬಳ್ಳಿ: ಸಿದ್ಧಾರೂಢ ಮಠದ ಪುಷ್ಕರಣಿ ಬಳಿಯ ಶೌಚಾಲಯದ ಹಿಂಭಾಗ 50 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಹಳೇಹುಬ್ಬಳ್ಳಿ …

Leave a Reply

Your email address will not be published. Required fields are marked *