Breaking News

ಟಿಪ್ಪರ್ ನಿಂದ ಕಲ್ಲು ಬಿದ್ದು, ಮಹಿಳಾ ಪೇದೆಗೆ ಗಾಯ; ಪ್ರಾಣಾಪಾಯದಿಂದ ಪಾರು

ಪೆರೇಸಂದ್ರ ಠಾಣೆಯಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ ಆಗುವ ವೇಳೆ, ರೇಣುಮಾಕಲಹಳ್ಳಿ ಕೆರೆ ಕಟ್ಟೆಯ ಸಮೀಪ ಟಿಪ್ಪರ್ ನಿಂದ ಕಲ್ಲು ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಮಹಿಳಾ ಪೊಲೀಸ್ ಪೇದೆಗೆ ಬಿದ್ದ ಪರಿಣಾಮ ತಲೆ ಮತ್ತು ಕಾಲಿಗೆ ಗಾಯಗಳಾಗಿ, ಪ್ರಾಣಾಪಾಯದಿಂದ ಪಾರಾದ ಘಟನೆ ಶುಕ್ರವಾರ ನಡೆದಿದೆ.ಹಸೀನ ಎಂಬ ಮಹಿಳಾ ಪೊಲೀಸ್ ಪೇದೆ ಕರ್ತವ್ಯ ಮುಗಿಸಿಕೊಂಡು, ಸ್ವಗ್ರಾಮವಾದ ತಾಲೂಕಿನ ಭತ್ತಲಹಳ್ಳಿ ಗ್ರಾಮಕ್ಕೆ ವಾಪಸ್ಸು ಆಗುವ ವೇಳೆ, ಎದುರುನಿಂದ ಹೋಗುತ್ತಿದ್ದ ಟಿಪ್ಪರ್ ಲಾರಿಯ ಮೇಲೆ ತುಂಬಿದ್ದ ಕಲ್ಲುಗಳಿಂದ ಒಂದು ಕಲ್ಲು ಜಾರಿ ಹಿಂಬದಿಯಲ್ಲಿ ಬರುತ್ತಿದ್ದ ಪೇದೆಯ ಮೇಲೆ ಬಿದ್ದು, ಮುಖದ ಮೇಲೆ ಗಾಯವಾಗಿ, ಕಾಲಿನ ಮೂಳೆ ಮುರಿದಿದ್ದು, ದ್ವಿಚಕ್ರ ವಾಹನ ಮುಂಭಾಗ ಜಖಂ ಆಗಿದೆ.ಸಂತ್ರಸ್ತೆ ಪೇದೆ ಚಿಕಿತ್ಸೆಗಾಗಿ ಗುಡಿಬಂಡೆ ಸಾರ್ವಜನಿಕರ ಆಸ್ಪತ್ರೆಗೆ ದಾಖಲಾಗಿದ್ದು, ಸ್ಥಳಕ್ಕೆ ಗುಡಿಬಂಡೆ ಉಪನಿರೀಕ್ಷಕ ಗಣೇಶ್ ಭೇಟಿ ನೀಡಿ ಟಿಪ್ಪರ್ ವಾಹನವನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ.

Share News

About BigTv News

Check Also

ವಿಜಯಪುರದಲ್ಲಿ ಮತ್ತೆ ಹರಿದ ನೆತ್ತರು, ಪತ್ನಿಯ ಎದುರಲ್ಲೇ ಅಮಾನುಷವಾಗಿ ಪತಿಯ ಜೀವ ತೆಗೆದ ರಾಕ್ಷಸರು

ವಿಜಯಪುರ: ನಗರದ ಮುಂಡೆವಾಡಿ ಆಸ್ಪತ್ರೆ ಎದುರು ಯಾಸೀನ್ ಠಕ್ಕೆ ಎಂಬಾತನ ಮೇಲೆ ದುಷ್ಕರ್ಮಿಗಳು ಎರಡು ಸುತ್ತು ಗುಂಡು ಹಾರಿಸಿ ಹತ್ಯೆ …

Leave a Reply

Your email address will not be published. Required fields are marked *