Breaking News

20 ಜನರ ಸಜೀವ ದಹನಕ್ಕೆ ಕಾರಣವಾದ ಬಸ್ಸಲ್ಲಿ ಚಿನ್ನಕ್ಕಾಗಿ ಹುಡುಕಾಟ.

ಆಂಧ್ರಪ್ರದೇಶ ಕರ್ನೂಲ್‌ನಲ್ಲಿ ಬಸ್‌ಗೆ ಬೆಂಕಿ ತಗುಲಿ 20 ಜನ ಪ್ರಯಾಣಿಕರು ಸಜೀವ ದಹನಗೊಂಡ ಘಟನೆ ನಡೆದಿತ್ತು. ಈ 20 ಜನರ ಸಾವಿನೊಂದಿಗೆ ಅನೇಕ ಕುಟುಂಬಗಳ ಕನಸುಗಳು ಸುಟ್ಟು ಭಸ್ಮವಾಗಿದೆ. ಈ ದುರಂತದಲ್ಲಿ ಮಕ್ಕಳು ಸೋದರ, ಸೋದರಿ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಗೋಳು ಹೇಳತೀರದಾಗಿದೆ. ಆದರೆ ಇದೇ ಸುಟ್ಟು ಕರಕಲಾದ ಬಸ್‌ನಲ್ಲಿ ಕೆಲವರು ಚಿನ್ನ ಹುಡುಕುವ ಯತ್ನದಲ್ಲಿದ್ದಾರೆ. ಈ ವೀಡಿಯೋ ಈಗ ಭಾರಿ ವೈರಲ್ ಆಗಿದ್ದು, ಅನೇಕರು ವೀಡಿಯೋ ನೋಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮೃತರ ಚಿತಾಭಸ್ಮವನ್ನು ಚೀಲದಲ್ಲಿ ತುಂಬಿಸಿ ಕೆಲವರು ಇಲ್ಲಿಂದ ಸಾಗಿಸುತ್ತಿದ್ದಾರೆ. ಒಂದೆಡೆ ಈ ದುರಂತದಲ್ಲಿ ಬಲಿಯಾದವರು ತಮ್ಮವರಿಗಾಗಿ ರೋಧಿಸುತ್ತಿದ್ದರೆ ಇತ್ತ ಕೆಲವರು ಅವರು ಹಾಕಿದ್ದ ಚಿನ್ನಾಭರಣವೇನಾದರು ಸಿಗಬಹುದೇ ಎಂಬುದನ್ನು ನೋಡುತ್ತಿರುವುದು ವಿಚಿತ್ರ ಎನಿಸಿದೆ.

Share News

About BigTv News

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *