Breaking News

ಪತ್ನಿ ಕಾಮದಾಟಕ್ಕೆ ಪತಿ ಬಲಿ, ಪ್ರಿಯಕರನ ಜೊತೆ ಸೇರಿ ಗಂಡನಿಗೆ ಚಟ್ಟ ಕಟ್ಟಿದ ಮಹಿಳೆ

ಇತ್ತೀಚೆಗೆ ಅಕ್ರಮ ಸಂಬಂಧದ ಕಾರಣಕ್ಕೆ ಪ್ರಿಯತಮನ ಜೊತೆ ಸೇರಿ ಪತಿಗೆ ಪತ್ನಿ ಚಟ್ಟ ಕಟ್ಟಿದ ಸಾಕಷ್ಟು ಪ್ರಕರಣಗಳು ದೇಶಾದ್ಯಂತ ಬೆಳಕಿಗೆ ಬರುತ್ತಿದೆ. ಉತ್ತರ ಪ್ರದೇಶದ ಮೀರತ್ ನಲ್ಲಿ ಇಂಥದ್ದೇ ಘಟನೆ ಬೆಳಕಿಗೆ ಬಂದಿದ್ದು, ಮೂರು ಮಕ್ಕಳ ತಾಯಿಯೊಬ್ಬಳು ಯುವಕನ ಜೊತೆ ಸೇರಿ ಗಂಡನನ್ನೇ ಕೊಂದು ಮುಗಿಸಿದ್ದಾಳೆ.ಉತ್ತರ ಪ್ರದೇಶದಲ್ಲಿ ಕಾಜಲ್‌ ಎಂಬ ಮಹಿಳೆ ಬೇಡದ ವಯಸ್ಸಿನಲ್ಲಿ ತನ್ನ ಅರ್ಧ ವಯಸ್ಸಿನ ಯುವಕನ ಜೊತೆ ಅಕ್ರಮ ಸಂಬಂಧ ಬೆಳೆಸಿ ಗಂಡನನ್ನೇ ಕೊಂದು ಆತನ ಮೃತದೇಹವನ್ನು ಕಾಲುವೆಗೆ ಬಿಸಾಡಿದ ಘಟನೆ ಬೆಳಕಿಗೆ ಬಂದಿದೆ. ಕೊಲೆಯಾದ ಅನಿಲ್ (32) ನಾಪತ್ತೆ ಆಗಿರುವುದಾಗಿ ಆತನ ಸಹೋದರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರಿಗೆ ಆರಂಭದಲ್ಲಿ ಯಾವುದೇ ಸುಳಿವು ಸಿಕ್ಕಿರಲಿಲ್ಲ.ಇದಾದ ಬಳಿಕ ಕಾಜಲ್‌, ಆಕೆಯ ಪ್ರಿಯಕರ ಆಕಾಶ್‌ & ಆತನ ಸ್ನೇಹಿತ ಸೇರಿ ಸುನಿಲ್ ನನ್ನು ಕೊಲೆ ಮಾಡಿರುವುದಾಗಿ ಆರೋಪಿಸಿ ಮತ್ತೊಂದು ಹೊಸ ದೂರು ನೀಡಿದ್ದರು. ಈ ಆಯಾಮದಲ್ಲಿ ತನಿಖೆ ಕೈಗೊಂಡ ಪೊಲೀಸರು ಕಾಜಲ್‌ & ಆಕಾಶ್‌ ಕಾಮದಾಟಕ್ಕೆ ಸುನಿಲ್ ಬಲಿಯಾಗಿರುವುದನ್ನು ತನಿಖೆಯಲ್ಲಿ ಬೇಧಿಸಿದ್ದಾರೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *