ಸೈಟ್ ಕೊಡಿಸುವುದಾಗಿ ಹಣ ಪಡೆದು ವಂಚನೆ ಮಾಡಿದ್ದ ಆರೋಪಿಯಿಂದ ದೂರುದಾರನಿಗೆ ಹಣ ಕೊಡಿಸುವಲ್ಲಿ ಸಹಾಯ ಮಾಡಿದ್ದ ಅಥಣಿ ಸಿಪಿಐ ಸಂತೋಷ ಹಳ್ಳೂರ ದೂರುದಾರನಿಗೆ ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಲೋಕಾಯುಕ್ತ ಡಿವೈಎಸ್‌ಪಿ ಭತರ ರೆಡ್ಡಿ ನೇತೃತ್ವದ ತಂಡ ಬುಧವಾರ ಅಥಣಿ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿತು.ಅಥಣಿ ನಿವಾಸಿ ಮೀರಸಾಬ ಮುಜಾವರ ಲೋಕಾಯುಕ್ತ ಕಚೇರಿಗೆ ಸಿಪಿಐ ಸಂತೋಷ ಹಳ್ಳೂರ ಮೇಲೆ ದೂರು ದಾಖಲಿಸಿದ್ದರು. ಅಥಣಿ ನಿವಾಸಿ ಅನುಪಕುಮಾರ ನಾಯರ ಎಂಬುವರಿಗೆ ಮೀರಸಾಬ ಮುಜಾವರ ಎರಡು ಸೈಟ್ ಖರೀದಿ ವ್ಯವಹಾರಕ್ಕೆ ಸಂಬಂಧಿಸಿದಂತೆ ₹20 ಲಕ್ಷ ನೀಡಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

