Breaking News

ಆಸ್ಟ್ರೇಲಿಯಾ ತಂಡವನ್ನ ಭಾರತ ಸಲೀಸಾಗಿ ಸೋಲಿಸಿ ಸರಣಿ ಗೆದ್ದಿದೆ…

ಕಳೆದ ಪಂದ್ಯದಲ್ಲಿ ಅಂದರೆ 3ನೇ ಟಿ20 ಮ್ಯಾಚ್‌ನಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ಟೀಂ ವಿರುದ್ಧ ಬರೋಬ್ಬರಿ 200ಕ್ಕೂ ಹೆಚ್ಚು ರನ್ ಗಳಿಸಿತ್ತು. ಆದ್ರೂ ಭಾರತ ತಂಡ ಗೆಲ್ಲೋದಕ್ಕೆ ಆಗಲೇ ಇಲ್ಲ. ಇದೀಗ ಆ ಪಂದ್ಯದ ಸೇಡನ್ನೂ ಭಾರತ ತೀರಿಸಿಕೊಂಡಿದೆ.ಇನ್ನು ಭಾರತದ ಬ್ಯಾಟಿಂಗ್ ಸಮಯದಲ್ಲಿ ಆಸ್ಟ್ರೇಲಿಯಾದ ಬೌಲರ್‌ಗಳು ಅಬ್ಬರಿಸಿದ್ರು. ಆಗ ಭಾರತಕ್ಕೆ ನೆರವಾಗಿದ್ದು ರಿಂಕು ಸಿಂಗ್ ಅವರ 46 ರನ್‌ಗಳ ಕೊಡುಗೆ. ಹೀಗೆ ಕೇವಲ 29 ಬಾಲ್ ಆಡಿದ್ದ ರಿಂಕು ಸಿಂಗ್ ಬರೋಬ್ಬರಿ 46 ರನ್ ಚಚ್ಚಿದ್ದರು.

ಆಸ್ಟ್ರೇಲಿಯಾ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡಿ 174 ರನ್ ಗಳಿಸಿತ್ತು. ಹೀಗೆ ಭಾರತ ನೀಡಿದ್ದ 175 ರನ್‌ಗಳ ಗುರಿ ಬೆನ್ನುಹತ್ತಿದ್ದ ಆಸ್ಟ್ರೇಲಿಯಾ, 154 ರನ್‌ಗೆ ಸೋತು ಹೋಯಿತು. ಆಸ್ಟ್ರೇಲಿಯಾ ತಂಡವನ್ನ ಭಾರತ ಸಲೀಸಾಗಿ ಸೋಲಿಸಿ ಸರಣಿ ಗೆದ್ದಿದೆ.ಭಾರತ ತಂಡ 2023ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯದವರೆಗೆ ಎಂಟ್ರಿ ಕೊಟ್ಟಿತ್ತು. ಆದರೆ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲು ಕಂಡಿತ್ತು. ಹೀಗೆ ಶತಕೋಟಿ ಭಾರತೀಯರಿಗೆ ಇದು ತುಂಬಾ ನೋವು ಕೊಟ್ಟಿತ್ತು. ಈಗ ಆ ಸೋಲಿಗೆ ಭಾರತ ತಂಡ ಸೇಡು ತೀರಿಸಿಕೊಂಡಿದೆ.

Share News

About BigTv News

Check Also

IPL 2025 : ಮೊದಲ ಪಂದ್ಯದಲ್ಲಿ ಗೆದ್ದು ಬಿಗಿದ ಆರ್‌ಸಿಬಿ

ಐಪಿಎಲ್ 2025ರ ಭಾಗವಾಗಿ ಆರ್ ಸಿ ಬಿ ವಿರುದ್ಧ ಪಂದ್ಯದಲ್ಲಿ ಕೆಕೆಆರ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡು ನಿಗದಿತ 20 …

Leave a Reply

Your email address will not be published. Required fields are marked *