Breaking News

ತುರ್ವಿಹಾಳ: ₹ 66 ಸಾವಿರ ಮೌಲ್ಯದ ಗಾಂಜಾ ವಶ

ಸಿಂಧನೂರು: ತಾಲ್ಲೂಕಿನ ಕೆ.ಹಂಚಿನಾಳ ಗ್ರಾಮದಲ್ಲಿ ಅಕ್ರಮವಾಗಿ ಬೆಳೆದಿದ್ದ ₹66 ಸಾವಿರ ಮೌಲ್ಯದ ಗಾಂಜಾ ಗಿಡಗಳನ್ನು ಕಾರ್ಯಾಚರಣೆ ನಡೆಸಿದ ತುರ್ವಿಹಾಳ ಠಾಣೆ ಪೊಲೀಸರು ವಶಪಡಿಸಿಕೊಂಡು, ಪ್ರಕರಣ ದಾಖಲಿಸಿದ್ದಾರೆ.ಸಾರ್ವಜನಿಕರ ಮಾಹಿತಿ ಮೇರೆಗೆ ಕೆ.ಹಂಚಿನಾಳ ಗ್ರಾಮದ ಬೋಡೆಪ್ಪ ಯಂಕಪ್ಪ(54) ಎಂಬುವರು ವಾಸಿಸುವ ಟಿನ್ ಶೆಡ್ ಪಕ್ಕದಲ್ಲಿ ಬೆಳೆಸಿದ್ದ ₹ 66 ಸಾವಿರ ಮೌಲ್ಯದ 22.16 ಕೆ.ಜಿಯ 3 ಹಸಿ ಗಾಂಜಾ ಗಿಡಗಳನ್ನು ಜಪ್ತಿ ಮಾಡಿದ್ದಾರೆ.ದಾಳಿ ವೇಳೆ ತಾ.ಪಂ ಸಹಾಯಕ ನಿರ್ದೇಶಕ ಅಮರಗುಂಡಪ್ಪ, ಪಂಚರಾದ ಸರ್ಕಾರಿ ಶಾಲೆ ಮುಖ್ಯಶಿಕ್ಷಕ ಬಾಬುಸಾಬ ಚೌದ್ರಿ, ಸಹಶಿಕ್ಷಕ ಬಸವರಾಜ ಕಡಿವಾಳ ಹಾಗೂ ತೂಕದ ಯಂತ್ರದ ಸಮೇತ ಎಸ್‌ಐ ಸುಜಾತಾ ಡಿ.ಎನ್. ಅವರು ಕಾರ್ಯಾಚರಣೆ ಪಾಲ್ಗೊಂಡಿದ್ದರು.

Share News

About BigTv News

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *