ಅಂಗಾಂಗಗಳ ಅಕ್ರಮ ಕಸಿಗಾಗಿ ಇರಾನ್‌ಗೆ ಮಾನವ ಕಳ್ಳಸಾಗಣೆ ಮಾಡುತ್ತಿದ್ದ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ಆರೋಪಿಗಳು ಆರಂಭಿಸಿದ್ದ ಕೇರಳದ ಹೆಲ್ತ್ ಕ್ಲಬ್‌ವೊಂದರ ಚಟುವಟಿಕೆಗಳನ್ನೂ ತನಿಖೆಗೆ ಒಳಪಡಿಸಿದೆ. ನ್ಯಾಯಾಲಯಕ್ಕೆ ತನಿಖಾ ಸಂಸ್ಥೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಈ ಅಂಶ ಬಹಿರಂಗವಾಗಿದೆ.ಇರಾನ್‌ನಲ್ಲಿ ಉಳಿದುಕೊಂಡಿದ್ದ ಜಯಕುಮಾರ್ ನವೆಂಬರ್ 7ರಂದು ಭಾರತಕ್ಕೆ ಮರಳಿದ್ದಾಗ ಬಂಧಿಸಲಾಗಿತ್ತು. ನವೆಂಬರ್ 19ರವರೆಗೆ ನ್ಯಾಯಾಲಯ ಎನ್‌ಐಎ ವಶಕ್ಕೆ ನೀಡಿತ್ತು.ಸಬಿತ್ ನಿರ್ವಹಿಸುತ್ತಿದ್ದ ಬ್ಯಾಂಕ್ ಖಾತೆಯಲ್ಲಿ ₹ 6 ಕೋಟಿ ವಹಿವಾಟು ನಡೆದಿರುವುದು ಪತ್ತೆಯಾಗಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

