ಗಾಂಜಾ ದಂಧೆಕೋರರಿಗೆ ಆಜಾದ್ ನಗರ ಪೊಲೀಸರ ಬೇಟೆ..! ₹1.25 ಲಕ್ಷದ ಮಾಲು ವಶ, ಎರಡು ಬೈಕ್ ಜಪ್ತಿ!

ದಾವಣಗೆರೆಯಲ್ಲಿ ಗಾಂಜಾ ದಂಧೆಗೆ ಆಜಾದ್ ನಗರ ಪೊಲೀಸರ ಏಟು..!
ಗಾಂಜಾ ಮಾರಾಟದ ಆರೋಪದಲ್ಲಿ ನಾಲ್ವರು ಅರೆಸ್ಟ್.. 2.5 ಕೆಜಿ ಗಾಂಜಾ, ಎರಡು ಬೈಕ್ ಪೊಲೀಸರ ವಶಕ್ಕೆ..!!
ದಾವಣಗೆರೆ: ನಗರದಲ್ಲಿ ಅಕ್ರಮ ಮಾದಕ ದ್ರವ್ಯಗಳ ಮಾರಾಟಕ್ಕೆ ಕಡಿವಾಣ ಹಾಕಲು ಪೊಲೀಸರು ಅಖಾಡಕ್ಕಿಳಿದಿದ್ದಾರೆ. ಇದೀಗ ಆಜಾದ್ ನಗರ ಪೊಲೀಸರ ಭರ್ಜರಿ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದರೆನ್ನಲಾದ ನಾಲ್ವರು ಆರೋಪಿಗಳು ಬಂಧನಕ್ಕೊಳಗಾಗಿದ್ದಾರೆ…
ಬಂಧಿತರಿಂದ ಬರೋಬ್ಬರಿ ₹1.25 ಲಕ್ಷ ಮೌಲ್ಯದ 2.5 ಕೆಜಿ ಗಾಂಜಾ ಹಾಗೂ ಎರಡು ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…
ಯುವ ಸಮುದಾಯದ ಭವಿಷ್ಯಕ್ಕೆ ಮಾರಕವಾಗಿರುವ ಮಾದಕ ದ್ರವ್ಯಗಳ ಅಕ್ರಮ ಮಾರಾಟ ಮತ್ತು ಸಾಗಾಟದ ವಿರುದ್ಧ ಪೊಲೀಸರ ಈ ಕಾರ್ಯಾಚರಣೆ ಮಹತ್ವ ಪಡೆದುಕೊಂಡಿದೆ. ಆದರೆ, ಗಾಂಜಾ ಮಾರಾಟದ ಜಾಲದ ಹಿಂದೆ ಇನ್ನೂ ಯಾರಾದರೂ ಇದ್ದಾರೆಯೇ? ಈ ದಂಧೆಗೆ ಗಾಂಜಾ ಪೂರೈಕೆ ಮಾಡುತ್ತಿರುವವರು ಯಾರು? ಎಂಬ ಪ್ರಶ್ನೆಗಳಿಗೂ ತನಿಖೆಯಿಂದ ಉತ್ತರ ಸಿಗಬೇಕಿದೆ….

ಈ ಕಾರ್ಯಾಚರಣೆಯಲ್ಲಿ ಪೊಲೀಸ್ ನಿರೀಕ್ಷಕರಾದ ಸುರೇಶ್ ಯಳ್ಳೂರ್, ಮಂಜುಳಾ, ಎಎಸ್‌ಐ ವೈ. ಮೂರ್ತಿ ಹಾಗೂ ಸಿಬ್ಬಂದಿಗಳಾದ ಕೃಷ್ಣ ಎನ್., ಲೋಕೇಶ್ ಗುಗ್ಗರಿ, ಖಾಜಾ ಹುಸೇನ್ ಅತ್ತಾರ, ಶಿವಾನಂದ ಸಂಗಪ್ಪನವರ, ಸಲಾಹುದ್ದಿನ್, ಮಾಲತೇಶ್ ಕೆಳಗಿನಮನಿ, ವೀರೇಶಯ್ಯ ಮತ್ತು ಗದ್ದಿಗೇಶ್ ಭಾಗವಹಿಸಿದ್ದರು…
ಪೊಲೀಸರ ಕಾರ್ಯವನ್ನು ಪೊಲೀಸ್ ಅಧೀಕ್ಷಕ ಶೇಖರ್ ಎಚ್.ಟಿ., ಐಪಿಎಸ್ ಅವರು ಪ್ರಶಂಸಿಸಿದ್ದಾರೆ…
ಗಾಂಜಾ ದಂಧೆಕೋರರಿಗೆ ಖಾಕಿ ಎಚ್ಚರಿಕೆ ನೀಡಿದೆಯೇ? ಅಕ್ರಮ ಮಾದಕ ದ್ರವ್ಯಗಳ ಜಾಲದ ಸಂಪೂರ್ಣ ಬೇರು ಕಿತ್ತೊಗೆಯಲು ದಾವಣಗೆರೆ ಪೊಲೀಸರ ಕಾರ್ಯಾಚರಣೆ ಮುಂದುವರಿಯಲಿ ಎಂಬುದು ಸಾರ್ವಜನಿಕರ ಆಶಯ.
bigtvnews | Hubli Dharwad News | Kannada News | Karnataka News Hubli News | News In Hubli | Local news

