ಪತ್ನಿಯ ಶೀಲದ ಬಗ್ಗೆ ಶಂಕೆ ಪಟ್ಟು, ಪತಿ ತಾನೇ ಪತ್ನಿಯನ್ನು ಹತ್ಯೆ ಮಾಡಿದ ಹೃದಯ ಕಲುಕುವ ಘಟನೆ ಕೋಲಾರ ತಾಲ್ಲೂಕಿನ ಜನ್ನಘಟ್ಟ ಗ್ರಾಮದಲ್ಲಿ ನಡೆದಿದೆ.ದಂಪತಿಗೆ ಆರು ವರ್ಷದ ಒಂದು ಹೆಣ್ಣು ಮಗು ಸಹ ಇದೆ. ಕುಟುಂಬದಲ್ಲಿ ಆಗಾಗ ಜಗಳಗಳು ನಡೆಯುತ್ತಿದ್ದು, ಪತ್ನಿಯ ನಡತೆಯ ಮೇಲೆ ಶಂಕೆ ಹೊಂದಿದ್ದ ಶಿವರಾಜ್, ಆಕ್ರೋಶದಿಂದಲೇ ಕಾವ್ಯಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಪತ್ನಿ ಪ್ರಜ್ಞೆ ತಪ್ಪಿದ್ದಾಳೆ ಎಂದು ನಾಟಕವಾಡಿದ ಶಿವರಾಜ್, ಕೊನೆಗೂ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಈ ದಾರುಣ ಘಟನೆಯ ನಂತರ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಶಿವರಾಜ್‍ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಗ್ರಾಮದಲ್ಲಿ ಘಟನೆ ದುಃಖ ಮತ್ತು ಖಂಡನೆಯ ವಾತಾವರಣ ನಿರ್ಮಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

