Breaking News

ಶ್ರೀಗಂಧದ ಮರ ಕತ್ತರಿಸಿದ ಕಳ್ಳರು

ನಾಯಕನಹಟ್ಟಿ: ಹೋಬಳಿಯ ಅಬ್ಬೇನಹಳ್ಳಿ ಗ್ರಾಮದ ಗೌಡರ ಹಾಲಪ್ಪ ಅವರ ಜಮೀನಿನಲ್ಲಿ ಬೆಳೆದಿದ್ದ ಶ್ರೀಗಂಧದ ಮರವನ್ನು ಶನಿವಾರ ರಾತ್ರಿ ಕಿಡಿಗೇಡಿಗಳು ಕತ್ತರಿಸಿದ್ದಾರೆ.ಗೌಡರ ಹಾಲಪ್ಪ ಅವರ ಜಮೀನು ಅಬ್ಬೇನಹಳ್ಳಿ ರಾಜ್ಯ ಹೆದ್ದಾರಿಯ ಪಕ್ಕದಲ್ಲೇ ಇದೆ. ಹೆದ್ದಾರಿಗೆ ಹೊಂದಿಕೊಂಡು ಮನೆಯಿದ್ದು, ಮನೆಯ ಹಿಂದೆಯೇ ಜಮೀನು ಇದೆ.15 ವರ್ಷದ ಶ್ರೀಗಂಧದ ಮರದ ಬುಡ ಕತ್ತರಿಸಿ ಸುಮಾರು 5 ಅಡಿಗಳಷ್ಟು ಶ್ರೀಗಂಧದ ತಿರುಳು (ಹಾಟ್ ವುಡ್) ಕಾಂಡವನ್ನು ಕತ್ತರಿಸಿ ಹೊತ್ತೊಯ್ದಿದ್ದಾರೆ. ಈ ಬಗ್ಗೆ ಗೌಡರಹಾಲಪ್ಪ ಅವರ ಮಗ ಸುಪುತ್ರ ಬಾಬು ಅರಣ್ಯ ಇಲಾಖೆ ಮತ್ತು ಪೊಲೀಸರಿಗೆ ದೂರು ನೀಡಿದ್ದಾರೆ.

Share News

About BigTv News

Check Also

ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಔಷಧ ಜಾಲ ಪತ್ತೆ, 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆಯಾಗಿತ್ತು ಫೇಕ್ ಮೆಡಿಸಿನ್

ಬೆಂಗಳೂರು: ಮಿನರ್ವ್ ಸರ್ಕಲ್‌ನ ಕೃಪಾ ಹೆಲ್ತ್‌ಕೇರ್‌ ಮೇಲೆ ಎಸ್‌ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ನಕಲಿ …

Leave a Reply

Your email address will not be published. Required fields are marked *