ಆನೇಕಲ್: ಕಾರ್ ನ ಟೈರ್ ಸ್ಪೋಟಗೊಂಡು ಕಾರ್ ಕೆರೆಗೆ ಪಲ್ಟಿಯಾಗಿರುವಂತಹ ಘಟನೆ ಬೆಂಗಳೂರು ಹೊರವಲಯದ ಜಿಗಣಿ ಕೆರೆಯ ಬಳಿಯಲ್ಲಿ ನಡೆದಿದೆ ಘಟನೆಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು ಮತ್ತೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ ಮಮತಾ ಮೃತ ದುರ್ದೈವಿಯಾಗಿದ್ದು ಆನೇಕಲ್ ತಾಲ್ಲೂಕಿನ ಜಿಗಣಿ ಕೆರೆ ಕಟ್ಟೆಯ ಮೇಲೆ ಮಮತಾ ಹಾಗು ಅವರ ಪತಿ ಆನಂದ್ ಸಾಂಟ್ರೋ ಕಾರಿನಲ್ಲಿ ಬರುತ್ತಿದ್ದಾಗ ಹಟಾತ್ ಕಾರ್ ನ ಟೈರ್ ಸ್ಪೋಟಗೊಂಡಿದೆ … ನಂತರ ಏಕಾಏಕಿ ಕಾರ್ ಪಲ್ಟಿ ಹೊಡೆದು ಜಿಗಣಿ ಕೆರೆಯ ಒಳಗೆ ಬಿದ್ದಿದೆ ಇನ್ನ ಆನಂದ್ ಹಾಗು ಮಮತಾ ಸಾಪ್ಟ್ವೇರ್ ಉದ್ಯೋಗಿಗಳಾಗಿದ್ದು ಹುಲಿಮಂಗಲದಲ್ಲಿ ವಾಸವಾಗಿದ್ದರು ಎನ್ನಲಾಗಿದೆ … ಜಿಗಣಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
bigtvnews | Hubli Dharwad News | Kannada News | Karnataka News Hubli News | News In Hubli | Local news





