ಸ್ನೇಹಿತೆಯ ಮನೆಗೆ ಕರೆದೊಯ್ದು ಪ್ರೇಯಸಿಯನ್ನು ಕೊಲೆಗೈದ ಪರಾರಿಯಾಗಿದ್ದ ಯುವಕನನ್ನು ಮಾದನಾಯಕನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ದೇವಿಶ್ರಿ ಹಾಗೂ ಪ್ರೇಮ್ ವರ್ಧನ್ ಆಂಧ್ರಪ್ರದೇಶ ಮೂಲ ದವರಾಗಿದ್ದು, ದ್ವಿತೀಯ ಪಿಯುಸಿ ವರೆಗೂ ಒಂದೇ ಶಾಲಾ- ಕಾಲೇಜಿನಲ್ಲಿ ಓದಿದವರು. ಹೀಗಾಗಿ ಇಬ್ಬರು ಸ್ನೇಹಿತರಾಗಿ ಪ್ರೀತಿಸುತ್ತಿದ್ದರು. ದೇವಿಶ್ರೀ ಬಿಬಿಎಂ ಮಾಡಲು ಬೆಂಗಳೂರಿಗೆ ಬಂದಿದ್ದು, ಈ ವೇಳೆ ಆಗಾಗ್ಗೆ ಪ್ರೇಮ್ ವರ್ಧನ್ ಬೆಂಗಳೂರಿಗೆ ಬಂದು ಆಕೆಯನ್ನು ಭೇಟಿಯಾಗುತ್ತಿದ್ದ. ಈ ನಡುವೆ ದೇವಿಶ್ರೀ ಬೇರೊಬ್ಬ ಯುವಕನ ಜತೆ ಸ್ನೇಹ ಬೆಳೆಸಿಕೊಂಡು ಫೋನ್‌ನಲ್ಲಿ ಹೆಚ್ಚು ಮಾತನಾಡಿದ್ದಳು ಎಂದು ಹೇಳಲಾಗಿದೆ
bigtvnews | Hubli Dharwad News | Kannada News | Karnataka News Hubli News | News In Hubli | Local news

