Breaking News

ರೈತರ ಸಾರ್ವಜನಿಕರ ಹಿತಾಸಕ್ತಿಗೆ ಪೂರಕವಾಗಿ ಸರ್ಕಾರಕ್ಕೆ ವರದಿ ಸಲ್ಲಿಕೆ: ಜಿಲ್ಲಾಧಿಕಾರಿ ಬಿ.ಫೌಜಿಯಾ

ಚಿತ್ತಾಪುರ: ಅಲ್ಟ್ರಾಟೆಕ್ ಸಿಮೆಂಟ್ ಕಂಪನಿ ವಿವಿಧ ಗ್ರಾಮಗಳಲ್ಲಿ ರೈತರ ಜಮೀನು ಖರೀದಿಸಿ ಕಲ್ಲು ಗಣಿಗಾರಿಕೆ, ಸಿಮೆಂಟ್ ಉತ್ಪಾದನಾ ಘಟಕ ಸ್ಥಾಪಿಸುವ ಕುರಿತು ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯ, ಬೇಡಿಕೆಗಳನ್ನು ಕ್ರೋಢೀಕರಿಸಿ ಪರಿಸರ, ರೈತರು, ಸಾರ್ವಜನಿಕರ ಹಿತಾಸಕ್ತಿಗೆ ಪೂರಕವಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದರು.
ತಾಲ್ಲೂಕಿನ ರಾವೂರು ಗ್ರಾಮದ ಡಿವೈನ್ ಭರಹುತ್ ಫಂಕ್ಷನ್ ಹಾಲ್‌ನಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿಯಿಂದ ನಡೆದ ಅಲ್ಟ್ರಾಟೆಕ್ ಸಿಮೆಂಟ್ ಕಂಪನಿಯು ಕೆ.ಚಿತ್ತಾಪುರ, ಕೆ.ನಾಗಾಂವ, ಯರಗಲ್, ರಾವೂರು ಗ್ರಾಮದ 713 ಹೆಕ್ಟೇರ್ ಪ್ರದೇಶದಲ್ಲಿ 5.10 ಎಂ.ಟಿ.ಪಿ.ಎ ಸಾಮರ್ಥ್ಯದ ಸುಣ್ಣದ ಕಲ್ಲು ಗಣಿಗಾರಿಕೆ ಆರಂಭಿಸುವ ಪ್ರಸ್ತಾವಕ್ಕೆ ಪರಿಸರ ಕುರಿತ ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಜಮೀನಿಗೆ ಬೆಲೆಯ ಬೇಡಿಕೆ, ಭೂ ಸಂತ್ರಸ್ತರ ಕುಟುಂಬಕ್ಕೆ ನೌಕರಿ ನೀಡುವ ಸಂಬಂಧ ಕಂಪನಿ ಆಡಳಿತ ಮಂಡಳಿಯು ಅಧಿಕೃತ ಪತ್ರ ನೀಡಬೇಕು ಎನ್ನುವುದು ರೈತರ ಬೇಡಿಕೆಯಾಗಿದೆ. ಪತ್ರ ನೀಡಲು ಜಿಲ್ಲಾಡಳಿತ ಕಂಪನಿಗೆ ಒಂದು ವಾರ ಕಾಲಾವಕಾಶ ನೀಡುತ್ತದೆ. ಲಿಖಿತವಾಗಿ ನೀಡಿದರೆ ಅದನ್ನೂ ವರದಿಗೆ ಅಳವಡಿಸುತ್ತೇವೆ. ಒಂದು ವೇಳೆ ಹಾಗೆ ಮಾಡದಿದ್ದರೆ ರೈತರ ಬೇಡಿಕೆ ಮತ್ತು ಸಭೆಯ ಅಭಿಪ್ರಾಯ ಯಥಾವತ್ತಾಗಿ ವರದಿಯಲ್ಲಿ ನಮೂದಿಸಿ ಸರ್ಕಾರಕ್ಕೆ ಸಲ್ಲಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ಪರಿಸರ ಅಧಿಕಾರಿ ಆರ್.ರೇಖಾ, ಪರಿಸರ ಅಧಿಕಾರಿ ಕೆ.ಎಂ.ಸೋಮಶೇಖರ, ಸೇಡಂ ಉಪ ವಿಭಾಗಾಧಿಕಾರಿ ಪ್ರಭುರೆಡ್ಡಿ, ಶಹಾಬಾದ್ ತಹಶೀಲ್ದಾರ್ ಜಗದೀಶ ಚೌರ್, ಅಲ್ಟ್ರಾಟೆಕ್ ಸಿಮೆಂಟ್‌ ಅಧಿಕಾರಿ ಉದಯ ಪವಾರ್, ಉಪಾಧ್ಯಕ್ಷ ಕೆ.ವಿ.ವಿ.ವೈ.ಎಸ್ ನಾರಾಯಣ ಹಾಜರಿದ್ದರು.

Share News

About BigTv News

Check Also

ಯುವತಿ ಕುತ್ತಿಗೆಗೆ ಚಾಕು ಇಟ್ಟು ಸರ ದರೋಡೆ ಯತ್ನ: ಕಿಡಿಗೇಡಿ ಬಂಧನ

ಬೆಂಗಳೂರು: ಇಂದಿರಾನಗರದ ಅಂಗಡಿಯೊಂದಕ್ಕೆ ನುಗ್ಗಿ ಯುವತಿಯ ಕುತ್ತಿಗೆಗೆ ಚಾಕು ಇಟ್ಟು ಚಿನ್ನದ ಸರ ದರೋಡೆಗೆ ಯತ್ನಿಸಿದ ಪ್ರಭುರಾಜ್ (40) ಎಂಬಾತನನ್ನು …

Leave a Reply

Your email address will not be published. Required fields are marked *