Breaking News

ಲಿಂಗನಮಕ್ಕಿ ಪವರ್ ಚಾನಲ್’ಗೆ ಅಳವಡಿಸಿದ್ದ ಹೆಚ್ಚುವರಿ ಕಾಂಕ್ರೀಟ್ ತಡೆಗೋಡೆ ಕುಸಿತ, ಹೆಚ್ಚಿದ ಆತಂಕ

ಸಾಗರ ತಾಲ್ಲೂಕಿನ ಲಿಂಗನಮಕ್ಕಿ ಜಲಾಶಯವು ನಾಡಿಗೆ ಬೆಳಕು ನೀಡುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದೆ. ಹೀಗೆ ಪ್ರಮುಖ ವಿದ್ಯುತ್ ಉತ್ಪಾದನೆ ಕೇಂದ್ರವಾಗಿರುವಂತ ಲಿಂಗನಮಕ್ಕಿಯ ಪವರ್ ಚಾನಲ್ ಗೆ ಹೆಚ್ಚುವರಿಯಾಗಿ ಕಟ್ಟಿದ್ದಂತ ಕಾಂಕ್ರೀಟ್ ತಡೆಗೋಡೆ ಕುಸಿತಗೊಂಡು ಆಂತಕಕ್ಕೆ ಕಾರಣವಾಗಿದೆ.ಬಹು ಕೋಟಿ ವೆಚ್ಛದಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ತಡೆಗೋಡೆ ಕುಸಿತಕ್ಕೆ ಕಳಪೆ ಕಾಮಗಾರಿ ಕಾರಣ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಕೆ. ವಿಜಯಕುಮಾರ್ ಬೆಂಗಳೂರಿನ ಲೋಕಾಯುಕ್ತರ ಕಾರ್ಯಾಲಯದಲ್ಲಿ ದೂರು ದಾಖಲಿಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲು ಆಗ್ರಹಿಸಿದ್ದರು.

Share News

About BigTv News

Check Also

ಬೆಂಗಳೂರಲ್ಲಿ ಪುಂಡರ ಹಾವಳಿ: ಗಾಂಜಾ ಮತ್ತಿನಲ್ಲಿ ಡೆಲಿವರಿ ಬಾಯ್ ಮೇಲೆ ಹಲ್ಲೆ!

ಬೆಂಗಳೂರು: ಯಲಹಂಕದ ಅಟ್ಟೂರು ಲೇಔಟ್‌ನಲ್ಲಿ ಡೆಲಿವರಿ ಬಾಯ್‌ ಮೇಲೆ ಆರೇಳು ಮಂದಿ ಯುವಕರ ಗುಂಪು ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. …

Leave a Reply

Your email address will not be published. Required fields are marked *