ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಮಂಗಳಗಿರಿ-ತಾಡೇಪಲ್ಲಿ ಹಿರಿಯ ಐಎಎಸ್ ಅಧಿಕಾರಿ ಮತ್ತು ಎಸ್‌ಸಿ ಕಾರ್ಪೊರೇಷನ್ ಕಾರ್ಯದರ್ಶಿ ಚಿನ್ನರಾಮ್ ಅವರ ಪುತ್ರಿ ಮಾಧುರಿ ಸಾಹಿತಿ ಬಾಯಿ (27) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಐಎಎಸ್ ಅಧಿಕಾರಿ ಕುಟುಂಬ ಮಗಳ ಸಾವನ್ನು ಆತ್ಮಹತ್ಯೆ ಎಂದು ಹೇಳಿದ್ದು, ಇದಕ್ಕೆ ಆಕೆಯ ಗಂಡನ ಮನೆಯವರ ವರದಕ್ಷಿಣೆ ಕಿರುಕುಳವೇ ಕಾರಣ ಎಂದು ಆರೋಪಿಸಿದ್ದಾರೆ. ತಾವು ಮನೆಯಲ್ಲಿರದಿದ್ದಾಗ ಮಗಳಾದ ಮಾಧುರಿ ರೂಮಿನ ಬಾಗಿಲು ಹಾಕಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಾವು ರೂಮಿನ ಬಾಗಿಲು ಒಡೆದು ನೋಡಿದಾಗ ಆಕೆ ನೇಣು ಬಿಗಿದ ಸ್ಥಿತಿಯಲ್ಲಿದ್ದಳು ಎಂದು ಹೇಳಿದ್ದಾರೆ.ಮಾಧುರಿ ತಾಯಿ ಲಕ್ಷ್ಮಿಬಾಯಿ ಸಲ್ಲಿಸಿದ ದೂರಿನ ಆಧಾರದ ಮೇಲೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

